ಮೈಸೂರು

ಡಿ.24 : ವಿವಿಧ ಸಮಾಜಸೇವಾ ಕಾರ್ಯಕ್ರಮ

ಡಾ.ಹೆಚ್.ಬಿ.ಮಂಜುನಾಥ್ ಅಭಿಮಾನಿಗಳ ಬಳಗದ ವತಿಯಿಂದ ಅವರ 40 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಡಿ.24 ರಂದು ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಎಸ್.ಇ.ಗಿರೀಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 6.30 ರಿಂದ 8.30 ರವರೆಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ವಾಯುವಿಹಾರಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, 8 ಗಂಟೆಗೆ ಅರಮನೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, 9.30 ಕ್ಕೆ ಲೋಕನಾಯಕ ನಗರದಲ್ಲಿರುವ ರಂಗರಾವ್ ಸ್ಮಾರಕ ವಿಶೇಷ ಚೇತನ ಬಡಮಕ್ಕಳಿಗೆ ಹಣ್ಣು-ಹಂಪಲು ವಿತರಣೆ, 10 ಗಂಟೆಗೆ ಪಿ.ಕೆ.ಟಿ.ಬಿ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ, 10.30 ಕ್ಕೆ ಬಿ.ಎನ್. ರಸ್ತೆಯಲ್ಲಿರುವ ಹೋಟೆಲ್ ಪೈವಿಸ್ತಾದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ನಂತರ 2017 ರ ಮೋದಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಮುತ್ತಣ್ಣ, ಮಣಿಕಂಠ, ಡಾ. ಶಶಿಧರ್, ಮನು, ಜಗದೀಶ್, ಮಧು, ಸುನಿಲ್ ಹಾಜರಿದ್ದರು.

Leave a Reply

comments

Related Articles

error: