ಕರ್ನಾಟಕ

ಕ್ರೀಡಾಪಟುಗಳು ಶ್ರಮದ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು: ಅಜಿತ್ ಕುಮಾರ್

ಹಾಸನ (ಸೆ.3): ಕ್ರೀಡೆಯಿಂದ ಮನಸ್ಸಿನ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪನಿರ್ದೇಶಕರಾದ ಅಜಿತ್ ಕುಮಾರ್ ತಿಳಿಸಿದರು. ಹಾಸನದಲ್ಲಿ ನಡೆದ ಕೃಷಿ ಮಹಾವಿದ್ಯಾಲಯಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅರ್ಥಿಗಳಾಗಿ ಪಾಲ್ಗೂಂಡು ಮಾತನಾಡಿದ ಅವರು, ಸ್ಪರ್ಧೆಯ ಅಂಕಣದಲ್ಲಿ ಪ್ರತಿಯೊಬ್ಬರೂ ಹೋರಾಡಬೇಕು, ಹಾಗಿದ್ದಲ್ಲಿ ಮಾತ್ರ ಉತ್ತಮ ಆಟಗಾರನಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಡೀನ್ (ಕೃಷಿ) ಡಾ.ಕೆ.ಎನ್.ಮುನಿಸ್ವಾಮಿಗೌಡರವರು ಮಾತನಾಡಿ, ಸೋಲು ಗೆಲವು ಎರಡನ್ನು ಧನಾತ್ಮಕವಾಗಿ ಸ್ವೀಕರಿಸಲು ಕರೆಕೊಟ್ಟರು. ಸೋಲೆ ಗೆಲುವಿಗೆ ರಹದಾರಿ ಆಟದಿಂದ ಆರೋಗ್ಯವೃದ್ದಿ ಮತ್ತು ಮನಸ್ಸಿನ ಶುದ್ದಿಯಾಗುತ್ತದೆ ಮತ್ತು ತಪ್ಪುಗಳನ್ನು ಅರಿತು ತಿದ್ದುಕೊಂಡು ಅಭ್ಯಾಸ ಮಾಡಿ ಗೆಲುವಿಗೆ ಶ್ರಮಿಸಿ ಎಂದು ಅವರು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ತೀಪ್ರ್ಮಗಾರರಾದ ಸಂಜಯ್. ವೇಣು, ನಂದೀಶ್,ಚಂದನ ಹಾಗೂ ದೈಹಿಕ ಶಿಕ್ಷಕರಾದ ಸಣ್ಣಪಾಲಯ್ಯ, ಸುಪ್ರಭ, ಅಶೋಕ್, ಯೋಗೆಶ್ ಹಾಗೂ ಜಗದೀಶ್ ಹಾಜರಿದ್ದರು. ಮೂರು ದಿನಗಳ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನಗಳಿಸಿದ ಕೃಷಿ ಮಹಾವಿದ್ಯಾಲಯ ಮಂಡ್ಯದ ಕ್ರೀಡಾಪಟುಗಳಗೆ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ರಾಮ್‍ಕುಮಾರ್ ಸಿ., ಉಪಸ್ಥಿತರಿದ್ದರು.(ಎನ್.ಬಿ)

Leave a Reply

comments

Related Articles

error: