ಕರ್ನಾಟಕ

ಪಾಲಿಹೌಸ್ ಘಟಕ ನಿರ್ಮಿಸಲು ಸಹಾಯಧನ

ಹಾಸನ (ಸೆ.4): ಚನ್ನರಾಯಪಟ್ಟಣ ತಾಲ್ಲೂಕು ತೋಟಗಾರಿಕೆ ಇಲಾಖೆವತಿಯಿಂದ ಕೃಷಿಭಾಗ್ಯ ಯೋಜನೆಯನ್ನು 2018-19 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪಾಲಿಹೌಸ್ ಘಟಕ ನಿರ್ಮಿಸಲು ಕನಿಷ್ಟ 500 ಚದುರ ಮೀಟರ್ ನಿಂದ ಗರಿಷ್ಟ 400 ಚದುರ ಮೀಟರ್ ವಿಸ್ತೀರ್ಣಕ್ಕೆ ಸಹಾಯಧನ ಲಭ್ಯವಿದ್ದು, ಪಾಲಿಹೌಸ್ ಘಟಕದ ಜೋತೆಗೆ ಮಳೆ ನೀರು ಸಂಗ್ರಹಣಾ ಘಟಕ ಡಿಸೇಲ್ ಮೋಟರ್ ಖರೀದಿ ಹಾಗೂ ಬೆಳೆ ಪದ್ಧತಿ ಚಟುವಟಿಕೆಗೆ ಸಹಾಯಧನ ನೀಡಲಾಗುವುದು.

ಇಲಾಖಾ ಮಾರ್ಗಸೂಚಿಯಂತೆ ಸಾಮಾನ್ಯ ವರ್ಗದ ರೈತರಗೆ ಶೇಕಡ. 50 ರಂತೆ ಸಹಾಯಧನ ನೀಡಲು ಅವಕಾಶವಿರುತ್ತದೆ, ಆಸಕ್ತ ರೈತರು ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿಗಳನ್ನು ಜಮೀನಿನ ದಾಖಲೆ ಆಧಾರ್ ಕಾರ್ಡ್ ಮತ್ತು ಇತರೆ ದಾಖಾಲೆಗಳೊಂದಿಗೆ ದಿನಾಂಕ 21/09/2018 ರ ಒಳಗೆ ಹೊಬಳಿ ಅಥವಾ ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಲು ಕೋರಿದೆ. ಸಂರ್ಪಕಿಸ ಬೇಕಾದ ದೂರವಾಣಿ ಸಂಖ್ಯೆ -028176-252282. (ಎನ್.ಬಿ)

Leave a Reply

comments

Related Articles

error: