ಮೈಸೂರು

ಪಾಲಿಕೆಯ ನೂತನ ಸದಸ್ಯೆ ರುಕ್ಮಿಣಿ ಪತಿಗೆ ಅಭಿಮಾನಿಗಳಿಂದ ಹಾಲಿನಭಿಷೇಕ

ಮೈಸೂರು,ಸೆ.4:- ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳಿಗೆ ಚುನಾವಣೆ ನಡೆಸಿಯೂ ಆಯಿತು, ಫಲಿತಾಂಶ ಕೂಡ ಹೊರಬಿತ್ತು. ಆದರೆ ಇಲ್ಲೋರ್ವ ಸದಸ್ಯರ ಅಭಿಮಾನಿಗಳು ಗೆದ್ದ ಸದಸ್ಯೆಯ ಪತಿಗೆ ಹಾಲಿನಿಂದ ಅಭಿಷೇಕ ಮಾಡಿದ್ದಾರೆ.

ಕಾರ್ಯಕರ್ತರು  ಅಂಧಾಭಿಮಾನ ಮೆರೆದಿದ್ದು, ಪಾಲಿಕೆಯ ನೂತನ ಸದಸ್ಯೆ ರುಕ್ಮಿಣಿ ಮಾದೇಗೌಡ ಅವರ ಪತಿ ಮಾದೇಗೌಡರಿಗೆ ಅಭಿಮಾನಿಗಳು ಎರಡು ಬಿಂದಿಗೆ ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ರುಕ್ಮಿಣಿ ಮಾದೇಗೌಡ ವಾರ್ಡ್ ನಂಬರ್ 36ರ ಪಾಲಿಕೆ ಸದಸ್ಯೆಯಾಗಿದ್ದು, ಮಾದೇಗೌಡ ಶ್ರೀರಾಂಪುರ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಯರಗನಹಳ್ಳಿ ವಾರ್ಡ್ ನ ಕೃಷ್ಣದೇವಸ್ಥಾನದ ಬಳಿ ಮಾದೇಗೌಡರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: