ಕರ್ನಾಟಕ

ಸಹಕಾರ ಸಂಘಗಳ ವಾರ್ಷಿಕ ಮಹಾಸಭೆ: ಕಡ್ಡಾಯ ಹಾಜರಾತಿಗೆ ಸೂಚನೆ

ಹಾಸನ (ಸೆ.4): ಸಹಕಾರ ಸಂಘಗಳ ಕಾಯಿದೆ 1959ರ ಕಲಂ 27(1)(ಎ) ರನ್ವಯ, ಎಲ್ಲಾ ವಿಧವಾದ ಸಹಕಾರ ಸಂಘ/ಬ್ಯಾಂಕ್‍ಗಳು 2017-18ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 25 ರೊಳಗೆ ಕಡ್ಡಾಯವಾಗಿ ನಡೆಸಬೇಕಾಗಿರುತ್ತದೆ.

ಆದುದರಿಂದ ಹಾಸನ ಉಪವಿಭಾಗದ ಎಲ್ಲಾ ಸಹಕಾರ ಸಂಘ/ಬ್ಯಾಂಕ್‍ಗಳು 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 25 ರೊಳಗೆ ನಡೆಸಿ ಕ್ರಮವಿಟ್ಟು, ವಾಷಿಕ ಮಹಾಸಭೆ ಆಹ್ವಾನ ಪತ್ರಿಕೆ, ಹಾಜರಾತಿ, ಸಭಾ ನಡವಳಿ ಹಾಗೂ ಅನುಮೋದನೆಗೊಂಡ ಆಸ್ತಿ-ಜವಾಬ್ದಾರಿ ತ:ಖ್ತೆಗಳನ್ನು ಸಂಘದ ಅಧ್ಯಕ್ಷರು/ಕಾರ್ಯದರ್ಶಿಯವರ ದೃಢೀಕರಣದೊಂದಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಹಾಸನ ರವರಿಗೆ ಸಲ್ಲಿಸಲು ಸೂಚಿಸಿದೆ. ಇತ್ತೀಚಿನ ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಸಹಕಾರ ಸಂಘದ ಸದಸ್ಯರು ಕಡ್ಡಾಯವಾಗಿ ವಾರ್ಷಿಕ ಮಹಾಸಭೆಗೆ ಹಾಜರಾಗತಕ್ಕದ್ದಾಗಿದ್ದು ತಪ್ಪಿದಲ್ಲಿ ಮುಂದೆ ನಡೆಯುವ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. ಆದ್ದರಿಂದ ಸಹಕಾರ ಸಂಘದ ಎಲ್ಲಾ ಸದಸ್ಯರುಗಳು ಕಡ್ಡಾಯವಾಗಿ ವಾರ್ಷಿಕ ಮಹಾಸಭೆಗೆ ಹಾಜರಾಗಲು ಸಹಕಾರ ಸಂಘಗಳ ಹಾಸನ ಉಪವಿಭಾಗದ ಸಹಾಯಕ ನಿಬಂಧಕರು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: