ಪ್ರಮುಖ ಸುದ್ದಿ

ಮಂಡ್ಯ ನಗರಸಭೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಗೌಡ

ರಾಜ್ಯ(ಮಂಡ್ಯ)ಸೆ.4:- ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ  ಮಂಡ್ಯದಲ್ಲಿ ನಡೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾನ ಮಾಡಿದ ಮತದಾರರಿಗೆ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಗೌಡ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

35 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ 10 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದು (4,5,9,10,17,18,21,26,27,30) ನೇ ವಾರ್ಡ್ ಗಳಲ್ಲಿ ಕಾಂಗ್ರೆಸ್  ಅಭ್ಯರ್ಥಿಗಳಿಗೆ  ಮತ ಮಾಡಿ ಗೆಲುವು ತಂದು ಕೊಟ್ಟಿದ್ದೀರಿ, ಹಾಗೆಯೇ ಉಳಿದ  ವಾರ್ಡ್ ಗಳಲ್ಲಿ  ಕಾಂಗ್ರೆಸ್ ಸೋತರೂ ಉತ್ತಮ ಮತಗಳನ್ನು ನೀಡಿದ ಮಂಡ್ಯದ ಮತದಾರರಿಗೆ ಕೃತಜ್ಞತೆಗಳು.  ಸೋತ ಅಭ್ಯರ್ಥಿಗಳು ನಿರಾಶರಾಗಬೇಡಿ ಪಕ್ಷ ನಿಮ್ಮೊಂದಿಗೆ ಇದೆ. ಎಲ್ಲರೂ ಸೇರಿ ನಗರದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಮನವಿ ಮಾಡಿದ್ದಾರೆ.

ಚುನಾವಣೆಯಲ್ಲಿ  ಗೆದ್ದ ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೆ ಶುಭಾಶಯ  ತಿಳಿಸುತ್ತ, ಮಂಡ್ಯ ನಗರದ ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳಿದ್ದು, ಗೆದ್ದ ಅಭ್ಯರ್ಥಿಗಳು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಮಾದರಿ ನಗರವನ್ನಾಗಿ ಮಾಡಲು ಶ್ರಮಿಸಿ, ನಾನು ಸಹಕಾರ ನೀಡುತ್ತೇನೆ. ಮಂಡ್ಯ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ  ಏರಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿನ ತಪ್ಪುಗಳನ್ನು ಸರಿಪಡಿಸಿ ಕಾಂಗ್ರೆಸ್ ಪಕ್ಷದ ಸಂಘಟನೆ ಒತ್ತು ನೀಡುತ್ತೇವೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: