ಪ್ರಮುಖ ಸುದ್ದಿ

ಸ್ನಾನಕ್ಕೆ ತೆರಳಿದ ವೇಳೆ ಕುಸಿದು ಬಿದ್ದ ಹಿರಿಯ ನಟ ದೊಡ್ಡಣ್ಣ : ಚೇತರಿಕೆ

ರಾಜ್ಯ(ರಾಯಚೂರು)ಸೆ.4:- ಚಂದನವನದ ಹಿರಿಯ ನಟ ದೊಡ್ಡಣ್ಣ ಸ್ನಾನ ಗೃಹದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಘಟನೆ ನಡೆದಿದೆ.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ನಿನ್ನೆಯಷ್ಟೇ ರಾಯಚೂರಿಗೆ ಕುಟುಂಬ ಸಮೇತರಾಗಿ ಬಂದಿದ್ದು, ದೇವಸ್ಥಾನವೊಂದಕ್ಕೆ ತೆರಳಿ ದೇವರ ದರ್ಶನ ಪಡೆದು ವಸತಿಗೃಹಕ್ಕೆ ಹಿಂದಿರುಗಿದ್ದರು. ಇಂದು ಬೆಳಿಗ್ಗೆ 6ಗಂಟೆಯ ಸಮಯದಲ್ಲಿ ಸ್ನಾನಕ್ಕೆ ತೆರಳಿದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ರಾಯಚೂರು ಶಕ್ತಿನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: