ಮೈಸೂರು

ಸೆ.14ರಂದು ವಿಟಿಯೂ ಅಂತರ ಕಾಲೇಜು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ

ಹೆಸರು ನೊಂದಾಯಿಸಿಕೊಳ್ಳಲು ಮನವಿ

ಮೈಸೂರು,ಸೆ.4: ನಗರದ ದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರಸಕ್ತ ಸಾಲಿನ ವಿಟಿಯು ಅಂತರ ಕಾಲೇಜು ಪುರುಷರ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಸೆ.14 ರಂದು ನಡೆಯಲಿದೆ.

ಅಂದು ಬೆಳಗ್ಗೆ 9.30ಕ್ಕೆ ಎನ್ ಐ ಇ ಕಾಲೇಜಿನ ವಜ್ರ ಮಹೋತ್ಸವ ಒಳಾಂಗಣ ಕ್ರೀಡಾ ಸಂಕೀರ್ಣದ್ಲಲಿ ನಡೆಯುವ ಪಂದ್ಯಾವಳಿಯನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಜಿಲ್ಲಾ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಪುಷ್ಪರಾಜ್ ಉದ್ಘಾಟಿಸಲಿದ್ದಾರೆ. ಡೀನ್ ಡಾ.ಜಿ.ಎಸ್.ಸುರೇಶ್ ಅಧ್ಯಕ್ಷತೆ. ದೈಹಿಕ ಶಿಕ್ಷಣ ವಿಭಾಗದ ವಲಯ ನಿರ್ದೇಶಕ ಪುಟ್ಟಸ್ವಾಮಿಗೌಡ ಉಪಸ್ಥಿತರಿರುವರು.

ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿರುವ ಎಲ್ಲಾ ತಾಂತ್ರಿಕ ಕಾಲೇಜುಗಳ ತಂಡಗಳು ಭಾಗವಹಿಸಬಹುದಾಗಿವೆ, ಹೆಸರು ನೋಂದಾಯಿಸಿಕೊಳ್ಳಲು ಸೆ.10 ಕೊನೆ ದಿನವಾಗಿದೆ. ಮಾಹಿತಿಗೆ ಎಚ್.ಎನ್.ಶಂಕರನಾರಾಯಣ ದೈಹಿಕ ಶಿಕ್ಷಣ ನಿರ್ದೇಶಕ, ಮೊ.ಸಂ. 9792056770, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕಿ ಕಾವ್ಯ ಆರ್. ಮೊ.ಸಂ. 9060198681 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: