ಮೈಸೂರು

ಜ.1-7 : ಗ್ರಾಮೀಣ ನಾಟಕೋತ್ಸವ

ಸರ್ವಚೇತನ ಅಭಿವೃದ್ಧಿ ಸಂಸ್ಥೆ ವತಿಯಿಂದ ಜ.1 ರಿಂದ 9 ರ ವರೆಗೆ ಪುರಭವನದಲ್ಲಿ 7 ದಿನಗಳ ರಾಜ್ಯಮಟ್ಟದ ಗ್ರಾಮೀಣ ನಾಟಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಕೃಷ್ಣೇಗೌಡ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮತ್ತು ರಂಗನಿರ್ದೇಶಕರ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಕಲಾಭಿಮಾನಿಗಳು ಸೇರಿ ಎಂ. ದೇವೇಗೌಡರು ಕೆ.ಜಿ.ಕೊಪ್ಪಲು ಇವರಿಗೆ ಬೆಳ್ಳಿ ಕಿರೀಟ ಧಾರಣೆಯನ್ನು ನೆರವೇರಿಸಲಿದ್ದಾರೆ. 7 ದಿನಗಳ ಕಾಲ ಮಧ್ಯಾಹ್ನ 12 ಗಂಟೆಗೆ ದಕ್ಷಯಜ್ಞ, ರಾಮಾಯಣ, ಭಕ್ತಪ್ರಹ್ಲಾದ, ಮಹಿಷಾಸುರ ಮರ್ದಿನಿ, ಶ್ರೀ ಶನಿಮಹಾತ್ಮೆ ನಾಟಕಗಳನ್ನು ಮೈಸೂರು, ಟಿ.ನರಸೀಪುರ, ಚನ್ನಪಟ್ಟಣ, ಕೊಳ್ಳೇಗಾಲ, ಕಾಡುಕೊಳ ಮತ್ತು ಸುತ್ತೂರು ಶಿವರಾತ್ರೀಶ್ವರ ಕಲಾ ತಂಡಗಳು  ಪ್ರದರ್ಶಿಸಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶಿವಲಿಂಗೇಗೌಡ, ಕೆ.ಬಿ. ಸ್ವಾಮಿ, ಮಹದೇವು, ಮೆಲ್ಲಹಳ್ಳಿ ಮಹದೇವಸ್ವಾಮಿ, ಸಾಗರ್  ಮತ್ತು ಅನಂತು ಹಾಜರಿದ್ದರು.

Leave a Reply

comments

Related Articles

error: