ಸುದ್ದಿ ಸಂಕ್ಷಿಪ್ತ

ದೀನದಯಾಳ್ ಸ್ಪರ್ಶ್ ಯೋಜನೆ: ಅರ್ಜಿ ಆಹ್ವಾನ

ಮೈಸೂರು,ಸೆ.4-ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದೀನದಯಾಳ್ ಸ್ಪರ್ಶ್ ಯೋಜನೆಯನ್ನು ಪರಿಚಯಿಸಿದ್ದು, ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ.

SPARSH ಎಂಬುದರ ವಿಸ್ತೃತವು `ಸ್ಕಾಲರ್ ಶಿಪ್ ಫಾರ್ ಪ್ರಮೋಶನ್ ಆಫ್ ಆಪ್ಟಿಟ್ಯೂಡ್ ಅಂಡ್ ರಿಸರ್ಚ್ ಇನ್ ಸ್ಟಾಂಪ್ ಆಸ್ ಎ ಹಾಬಿ’ ಎಂದಾಗಿದೆ (ಅ0ಚೆ ಚೀಟಿ ಸಂಗ್ರಹದ ಹವ್ಯಾಸದ ಮೂಲಕ ಕೌಶಲ ಹಾಗೂ ಸಂಶೋಧನಾತ್ಮಕ ಮನೋಭಾವವನ್ನು ಪ್ರೋತ್ಸಾಹಿಸುವ ಸಲುವಾಗಿ ವಿದ್ಯಾರ್ಥಿ ವೇತನ).

ಈ ವಿದ್ಯಾರ್ಥಿ ವೇತನದ ಉದ್ದೇಶವೆಂದರೆ ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ, ಪಠ್ಯ ವಿಷಯಗಳಿಗೆ ಪೂರಕವಾಗಬಲ್ಲ ಹಾಗೂ ಬಲಪಡಿಸಬಲ್ಲ ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ಬೆಳೆಸಿ, ಮುಂದುವರೆಸುವ0ತೆ ಪ್ರೋತ್ಸಾಹಿಸುವುದು. ಈ ಹವ್ಯಾಸವು ವಿದ್ಯಾರ್ಥಿಗಳ ಒತ್ತಡವನ್ನು ನಿವಾರಿಸುವುದು ಹಾಗೂ ಹಗುರಗೊಳಿಸುವುದು.  ಈ ಯೋಜನೆಯಡಿಯಲ್ಲಿ 2017-18 ರಲ್ಲಿ ಶೇ.60 ಅಂಕಗಳನ್ನು ಹೊಂದಿರುವ 6ನೇ ತರಗತಿಯಿಂದ 9ನೇ ತರಗತಿಯ ಫಿಲಾಟಲಿ ಡಿಪಾಸಿಟ್ ಖಾತೆ ಹೊಂದಿರುವ / ಅಂಚೆ ಚೀಟಿ ಕೂಟದ ಸದಸ್ಯರಾಗಿರುವ, ಅಂಚೆ ಚೀಟಿ ಸಂಗ್ರಣೆಯನ್ನು ಹವ್ಯಾಸವಾಗಿ ಮುಂದುವರಿಸುವ ವಿದ್ಯಾರ್ಥಿಗಳಿಗೆ 6000 ರೂ. ಅನ್ನು ವಾರ್ಷಿಕ ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

ಅಂಚೆ ಚೀಟಿ ರಸಪ್ರಶ್ನೆ ಲಿಖಿತ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು, ಅಂಚೆ ಇಲಾಖೆಯು ನೀಡುವ ಪ್ರಾಜೆಕ್ಟನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾಗುತ್ತದೆ.

ಅಂಚೆ ಚೀಟಿ ಸಂಗ್ರಹದ ಲಿಖಿತ ರಸಪ್ರಶ್ನೆ  ಪರೀಕ್ಷೆಗೆ ಅರ್ಜಿಯನ್ನು ನೀಡಲು ಕೊನೆಯ ದಿನವನ್ನು ಸೆ.15ರವರೆಗೆ ವಿಸ್ತರಿಸಲಾಗಿದೆ.  ಎಲ್ಲಾ ಶಾಲಾ ಶಿಕ್ಷಕರನ್ನು, ತಮ್ಮ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳಿಗೆ ಇಲಾಖೆಯ www.indiapost.gov.in ಮತ್ತು     www.karnatakapost.gov.in ಜಾಲತಾಣಗಳಿಗೆ ಭೇಟಿ ನೀಡಬಹುದು. (ಎಂ.ಎನ್)

Leave a Reply

comments

Related Articles

Check Also

Close
error: