ಪ್ರಮುಖ ಸುದ್ದಿ

“ಆರೋಗ್ಯ ಕರ್ನಾಟಕ’ ಯೋಜನೆಯು ದೇಶಕ್ಕೆ ಮಾದರಿಯಾಗಿದೆ : ಸಚಿವ ಶಿವಾನಂದ ಎಸ್.ಪಾಟೀಲ್

ರಾಜ್ಯ(ಬೆಂಗಳೂರು)ಸೆ.5:-  ಸಾರ್ವತ್ರಿಕ ಆರೋಗ್ಯ ಸೇವೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ “ಆರೋಗ್ಯ ಕರ್ನಾಟಕ’ ಯೋಜನೆಯು ದೇಶಕ್ಕೆ ಮಾದರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದರು.

ನಗರದಲ್ಲಿ ಖಾಸಗಿ ಹೋಟೆಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕುಟುಂಬ ಯೋಜನೆಗಳ ವೇಳೆ, ವಿಧಾನ ಮತ್ತು ಗರ್ಭಪಾತ ನಂತರ ಹಾಗೂ ಮೊದಲಿನ ಸ್ಥಿತಿಯನ್ನು ಸಮರ್ಥನೀಯವಾಗಿ ಉತ್ತಮಪಡಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಯೋಜನೆಯು ಆರೋಗ್ಯ ಕರ್ನಾಟಕ ಮಾದರಿಯಲ್ಲಿದೆ. ಈ ಯೋಜನೆಗಳನ್ನು ಇತರೆ ರಾಜ್ಯಗಳಲ್ಲಿಯೂ ಅನುಸರಿಸಲಾಗುತ್ತಿದೆ. ಅಲ್ಲದೆ, ಆರೋಗ್ಯ ಕರ್ನಾಟಕ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ, ಈಗ ಈ ಯೋಜನೆಯಿಂದ 1.30 ಕೋಟಿಯಿಂದ 5 ಕೋಟಿ ಜನರಿಗೆ ಚಿಕಿತ್ಸೆ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಗರ್ಭಪಾತ ಸಂಬಂಧ ಈ ಯೋಜನೆಯಿಂದಾಗಿ, ಸೂಕ್ತ ಮಾಹಿತಿ, ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಗರ್ಭದ ನಂತರ ಹಾಗೂ ಮೊದಲಿನ ಸ್ಥಿತಿಯನ್ನು ಸಮರ್ಥನೀಯವಾಗಿ ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಹಲವು ವರ್ಷಗಳಿಂದ ದೇಶದಲ್ಲಿ ಆರೋಗ್ಯ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಗಳು ಪೈಪೋಟಿ ನೀಡಬೇಕು. ಈ ನಿಟ್ಟಿನಲ್ಲಿ ನಾವು 2 ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠವಾಗಬೇಕು ಎಂದು ನುಡಿದರು.

ಆರೋಗ್ಯ ಸೇವೆ ಉತ್ತಮಗೊಳಿಸಲು, ಇಲಾಖೆ ವ್ಯಾಪ್ತಿಯ ಪ್ರತಿಯೊಬ್ಬರ ಶ್ರಮ ಅಗತ್ಯ ಇದೆ. ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿವರೆಗೂ ಎಲ್ಲರೂ ಸೇವೆಗೆ ಮುಂದಾಗಬೇಕು. ಇನ್ನು ಯೋಜನೆಗಳ ಕುರಿತು 6 ತಿಂಗಳಿಗೊಮ್ಮೆ ಪರಿಶೀಲನೆ ಕಡ್ಡಾಯ ಗೊಳಿಸಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: