ಪ್ರಮುಖ ಸುದ್ದಿಮನರಂಜನೆ

ಮಲಯಾಳಂ ನಟ ಮೋಹನ್ ಲಾಲ್ ಸೇರಲಿದ್ದಾರೆಯೇ ಬಿಜೆಪಿ?

ದೇಶ(ನವದೆಹಲಿ)ಸೆ.5:- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ದಕ್ಷಿಣ ಭಾರತದತ್ತ ತನ್ನ ದೃಷ್ಟಿ ಹರಿಸಿದೆ. ಇದಕ್ಕಾಗಿಯೇ ಪಕ್ಷವು ತಮಿಳುನಾಡು, ಕೇರಳ, ಕರ್ನಾಟಕಗಳಲ್ಲಿ ಹೊಸ ಮುಖಗಳ ಹುಡುಕಾಟ ನಡೆಸಿದೆ.

ನಿನ್ನೆ ಮಲಯಾಳಂ ನಟ ಮೋಹನ್ ಲಾಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಮೋಹನ್ ಲಾಲ್ ಭೆಟಿ ನಂತರ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಮೋಹನ್ ಲಾಲ್ ಅವರಿಗೆ ಟಿಕೇಟ್ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಎದುರು ನಟ ಮೋಹನ್ ಲಾಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಲಯಾಳಂ ಪ್ರಖ್ಯಾತ ನಟ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿ ತಮ್ಮ ನೇತೃತ್ವದಲ್ಲಿ ನಡೆದ ಸಾಮಾಜಿಕ ಕಾರ್ಯಕ್ರಮಗಳ ಕುರಿತು ವಿವರಿಸಿದರು.  ಬಳಿಕ ಟ್ವೀಟ್ ಮಾಡಿದ ಅವರು ಮೋಹನ್ ಲಾಲ್ ಅವರೊಂದಿಗಿನ ಭೇಟಿ ಉತ್ತಮವಾಗಿತ್ತು. ಅವರ  ಸಾಮಾಜಿಕ ಸೇವಾ ಕಾರ್ಯದ ಪ್ರಯತ್ನಗಳು ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ’ ಎಂದಿದ್ದಾರೆ.

ಮೋಹನ್ ಲಾಲ್ ಅವರು ತಮ್ಮ ಫೇಸ್ಬುಕ್ ಪುಟಗಳಲ್ಲಿ ಮಾಹಿತಿ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: