ಮೈಸೂರು

ದಯಾಸಾಗರ ಎಂ ವೆಂಕಟಕೃಷ್ಣಯ್ಯ ತಾತಯ್ಯ ಅವರ 174 ನೇ ಜಯಂತಿ : ತಾತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಣೆ

ಮೈಸೂರು,ಸೆ.5:- ವೃದ್ಧ ಪಿತಾಮಹ, ದಯಾಸಾಗರ ಎಂ ವೆಂಕಟಕೃಷ್ಣಯ್ಯ ತಾತಯ್ಯ ಅವರ 174 ನೇ ಜಯಂತಿ ಯನ್ನು ನಗರದ ಸಿಟಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ತಾತಯ್ಯ  ಉದ್ಯಾನವನದಲ್ಲಿಂದು ಅನಾಥಾಲಯ ಹಳೆಯ ವಿದ್ಯಾರ್ಥಿ ಸಂಘ ಮತ್ತು ನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ತಾತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸುವ ಮೂಲಕ ಆಚರಿಸಲಾಯಿತು.

ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ ಸೆ.5 ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ .ವೃದ್ಧ ಪಿತಾಮಹ ದಯಾಸಾಗರ ಪೂಜ್ಯ ತಾತಯ್ಯನವರ ಜನ್ಮದಿನವೂ ಸೆಪ್ಟೆಂಬರ್ 5 ನಾಲ್ವಡಿ ಕೃಷ್ಣರಾಜ ಒಡೆಯರ ಅವರಿಗೂ ರಾಜ ಗುರುಗಳಾದವರು .ರಾಷ್ಟ್ರಪತಿ ಗಳಾಗಿದ್ದ   ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ   ಶಿಕ್ಷಕರಾಗಿದ್ದವರು .ಸಾಧಾರಣ ಶಿಕ್ಷಕರಾಗಿದ್ದ ತಾತಯ್ಯನವರಿಗೆ ಸರ್ಕಾರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ನಗರ ಪಾಲಿಕೆ ಮತ್ತು ಅನಾಥಾಲಯ ಹಳೆಯ ವಿದ್ಯಾರ್ಥಿ ಸಂಘದವರು ತಾತಯ್ಯ ಜನ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದಾರೆ. ತಾತಯ್ಯನವರನ್ನು  ದಕ್ಷಿಣದ ಬಾಲಗಂಗಾಧರ ತಿಲಕ್ ಹಾಗೂ ಕನ್ನಡ ಪತ್ರಿಕೋದ್ಯಮದ ಭೀಷ್ಮ ಪಿತಾಮಹ ಎಂದೇ   ಕರೆಯಲಾಗಿದೆ . ಇಂತಹ ಮಹಾತ್ಮರಿಗೆ ಮೂಡಾದವರು ಯಾವುದಾದರೂ ಹೊಸ ಬಡಾವಣೆಗೆ ತಾತಯ್ಯ ಬಡಾವಣೆ ಎಂದು ನಾಮಕರಣಗೊಳಿಸಬೇಕೆಂದು ಆಗ್ರಹಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮಾತನಾಡಿ ಜರ್ಮನಿಯ ಹರ್ಮನ್ ಮೋಗ್ಲಿಂಗ್ ಅವರು 1843 ಜುಲೈ 1 ರಂದು ‘ಮಂಗಳೂರು ಸಮಾಚಾರ’ ಪತ್ರಿಕೆಯನ್ನು ಹೊರ ತರುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. ಅದರಂತೆ ಪತ್ರಿಕೆಗಳಿಂದ ಪ್ರಭಾವಿತರಾದ ದಿ ತಾತಯ್ಯ ಅವರು ‘ಹಿತಬೋಧಿನಿ ‘ ‘ಸಾಧ್ವಿ’ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನು ಹೊರ ತರುವುದರೊಂದಿಗೆ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳ ಉಗಮಕ್ಕೆ ಕಾರಣರಾದರು ಎಂದು ತಾತಯ್ಯ ಅವರು ಪತ್ರಿಕೋದ್ಯಮ ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ,ಪ್ರೊಫೆಸರ್ ಬಿಎಸ್ ಸುಂದರೇಶ್ , ಅನಾಥಾಲಯ ಹಳೆಯ ವಿದ್ಯಾರ್ಥಿಗಳಾದ ನಾಗರಾಜ್ ,ಶ್ರೀಧರ್ ಮೂರ್ತಿ ,ಭಗವಾನ್ ,ಎಸ್ ರವಿಶಂಕರ್ ,ಎಚ್ ಜೆ ಸೂರ್ಯ ನಾರಾಯಣ್ ,ರವೀಂದ್ರ ಮತ್ತಿತರರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: