ಕರ್ನಾಟಕ

ತಾಲ್ಲೂಕು ಮಟ್ಟದ ಯುವ ರೈತ, ರೈತ ಮಹಿಳಾ ಪ್ರಶಸ್ತಿ : ಆರ್ಜಿ ಆಹ್ವಾನ

ಮಂಡ್ಯ (ಸೆ.5): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಇವರು ನವೆಂಬರ್ 2018 ರಲ್ಲಿ ಕೃಷಿ ಮೇಳವನ್ನು ಆಯೋಜಿಸುತ್ತಿದ್ದು ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಒಬ್ಬ ಪ್ರಗತಿಪರ ಯುವ ರೈತ ಮತ್ತು ಒಬ್ಬ ರೈತ ಮಹಿಳೆಯನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ರೈತರು ಅರ್ಜಿಗಳನ್ನು ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಮತ್ತು ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅ.9 ರೊಳಗಾಗಿ ಸಂಬಂಧಪಟ್ಟ ಅಧಿಕಾರಿಗಳ ಕಛೇರಿಗೆ ತಲುಪಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ವಿ.ಸಿ ಫಾರಂ, ಮಂಡ್ಯ ಅಥವಾ ದೂರವಾಣಿ ಸಂಖ್ಯೆ: 08232 277566, ಮೊ. 9449864250 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: