ಕರ್ನಾಟಕ

ಮಂಡ್ಯ: ಜಿಲ್ಲಾಮಟ್ಟದ ಪ್ರಗತಿಪರ ರೈತ, ರೈತ ಮಹಿಳಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಮಂಡ್ಯ (ಸೆ.5): ಮಂಡ್ಯ ಜಿಲ್ಲೆಗೆ ಸಂಬಂದಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ಒಬ್ಬ ಪ್ರಗತಿಪರ ರೈತ ಮತ್ತು ಒಬ್ಬ ರೈತ ಮಹಿಳೆಯನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ರೈತರು ಅರ್ಜಿಗಳನ್ನು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು / ಉಪನಿರ್ದೇಶಕರು, ತೋಟಗಾರಿಕೆ / ಪಶುಸಂಗೋಪನೆ / ರೇಷ್ಮೆ / ಮೀನುಗಾರಿಕೆ ಮತ್ತು ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ವಿ.ಸಿ ಫಾರಂ, ಮಂಡ್ಯ ಇವರ ಕಛೇರಿಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 6 ರ ಒಳಗಾಗಿ ಸಂಬಂಧಪಟ್ಟ ಕಛೇರಿಗಳಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ವಿ ಸಿ ಫಾರಂ, ಮಂಡ್ಯ ಅಥವಾ ದೂರವಾಣಿ ಸಂಖ್ಯೆ :08232 277566, ಮೊ. 9449864250 ಅನ್ನು ಸಂಪರ್ಕಿಸಬಹುದು.(ಎನ್.ಬಿ)

Leave a Reply

comments

Related Articles

error: