ಕರ್ನಾಟಕಪ್ರಮುಖ ಸುದ್ದಿ

ಹಾಸನಕ್ಕೆ ವಿಧಾನಸೌಧ ಶಿಫ್ಟ್ ಮಾಡಬಹುದು : ಸರ್ಕಾರದ ನಡೆಗೆ ಬಿಜೆಪಿ ವ್ಯಂಗ್ಯ!

ಬೆಂಗಳೂರು (ಸೆ.9): ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್‌) ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ಲೇವಡಿ ಮಾಡಿದ್ದು, ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರವಾದರೆ ಅಶ್ಚರ್ಯಪಡಬೇಕಿಲ್ಲ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದೆ.

ಬಿಜೆಪಿ ಕರ್ನಾಟಕ ಖಾತೆಯಿಂದ ಟ್ವೀಟ್‌ ಈ ಮಾಡಲಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಕೆಶಿಪ್‌ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನು ನೋಡಿದರೆ ಶೀಘ್ರದಲ್ಲಿ ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರವಾದರೆ ಅಚ್ಚರಿ ಪಡಬೇಕಿಲ್ಲ. ಕುಮಾರಸ್ವಾಮಿ ಸರ್ಕಾರ ಎಲ್ಲ ಕಚೇರಿಗಳನ್ನೂ ಹಾಸನ, ಮಂಡ್ಯ ಮತ್ತು ರಾಮನಗರಕ್ಕೆ ಸ್ಥಳಾಂತರಿಸಿ ಉಳಿದ ಜಿಲ್ಲೆಗಳನ್ನು ಸೌಲಭ್ಯವಂಚಿತವಾಗಿಸಿರುವುದನ್ನು ಖಾತರಿ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದು ಟ್ವೀಟ್‌ ಮಾಡಿದೆ. (ಎನ್.ಬಿ)

Leave a Reply

comments

Related Articles

error: