ಕ್ರೀಡೆ

ನಾಲ್ಕು ತಿಂಗಳು ತರೆಬೇತಿ ಪಡೆದ ಅಥ್ಲೀಟ್ ಮಾಡಿದ್ದು ವಿಸ್ಮಯ ಸಾಧನೆ

ನವದೆಹಲಿ,ಸೆ.5- ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅಥ್ಲೀಟ್ ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇವರಲ್ಲಿ ಕೇರಳದ ಅಥ್ಲೀಟ್ ಮಾಡಿರುವ ಸಾಧನೆ ನಿಜಕ್ಕೂ ವಿಸ್ಮಯ.

ಹೌದು, ಕೋಚ್ ಗಲಿನಾ ಬುಖಾರಿಯವರೊಂದಿಗೆ ಕೇವಲ ನಾಲ್ಕು ತಿಂಗಳು ತರಬೇತಿ ಪಡೆದಿದ್ದ ಕೇರಳದ ಅಥ್ಲೀಟ್ ವಿ.ಕೆ.ವಿಸ್ಮಯ 4-400 ಮೀ ಮಹಿಳೆಯರ ರಿಲೇ ತಂಡದಲ್ಲಿ ಭಾಗವಹಿಸಿ ಭಾರತ ಏಷ್ಯನ್ ಗೇಮ್ಸ್ ನಲ್ಲಿ ಸತತ 5ನೇ ಬಾರಿ ಚಿನ್ನ ಜಯಿಸುವಂತೆ ಮಾಡಿದ್ದಾರೆ.

ಭಾರತ ರಿಲೇ ತಂಡದಲ್ಲಿದ್ದ ಹಿಮಾ ದಾಸ್, ಎಂ.ಆರ್.ಪೂವಮ್ಮ ಹಾಗೂ ಸರಿತಾಬೆನ್ ಗಾಯಕ್ವಾಡ್ ತನ್ನ ಮೊದಲ ಅಂತಾರಾಷ್ಟ್ರೀಯ ಕೂಟದಲ್ಲಿ ವಿಸ್ಮಯ ನೀಡಿದ್ದ ಪ್ರದರ್ಶನ ನೋಡಿ ಬೆರಗಾಗಿದ್ದಾರೆ.

ಕಣ್ಣೂರಿನ ಓಟಗಾರ್ತಿ ವಿಸ್ಮಯ .24 ರಂದು ಜಕಾರ್ತದಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಜಿಸ್ನಾ ಮ್ಯಾಥ್ಯೂ ಹಾಗೂ ವಿಜಯಾ ಕುಮಾರಿ ಅವರನ್ನು ಹಿಂದಿಕ್ಕಿ ಭಾರತ ಮಹಿಳೆಯರ ರಿಲೇ ತಂಡಕ್ಕೆ ನಾಲ್ಕನೇ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

ವಿಸ್ಮಯ ಏಷ್ಯನ್ ಗೇಮ್ಸ್ಗಿಂತ ಮೊದಲು ಯಾವುದೇ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ನೇಷನ್ಸ್, ಫೆಡರೇಷನ್ ಕಪ್ ಹಾಗೂ ಅಂತರ್ರಾಜ್ಯ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ. ವರ್ಷದ ಏಪ್ರಿಲ್ನಲ್ಲಿ ಮೊದಲ ಬಾರಿ ರಾಷ್ಟ್ರೀಯ ಶಿಬಿರವನ್ನು ಸೇರಿದ್ದರು.

ನವೆಂಬರ್ನಲ್ಲಿ ವಿಜಯವಾಡದಲ್ಲಿ ನಡೆದ ಅಂತರ್ ವಿವಿ ಚಾಂಪಿಯನ್ಶಿಪ್ನಲ್ಲಿ 400 ಮೀ.ಓಟದಲ್ಲಿ 53.63 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದ್ದರು. ಮೂಲಕ ಭಾರತದ ಅಥ್ಲೆಟಿಕ್ಸ್ ಫೆಡರೇಷನ್(ಎಎಫ್) ಗಮನ ಸೆಳೆದಿದ್ದರು. ವಿಜಯವಾಡದಲ್ಲಿ ನೀಡಿದ್ದ ಪ್ರದರ್ಶನವನ್ನು ಆಧರಿಸಿದ ಎಎಫ್ ವಿಸ್ಮಯಗೆ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಲು ನೇರ ಪ್ರವೇಶ ನೀಡಿತ್ತು. 72 ಹರೆಯದ ಕೋಚ್ ಗಲಿನಾ ಅವರು ವಿಸ್ಮಯರನ್ನು ಗೇಮ್ಸ್ಗೆ ಸಜ್ಜುಗೊಳಿಸಿದರು. (ಎಂ.ಎನ್)

Leave a Reply

comments

Related Articles

error: