
ಕರ್ನಾಟಕಪ್ರಮುಖ ಸುದ್ದಿಮೈಸೂರು
ಮುಂದಿನ ಬಜೆಟ್ ನಲ್ಲಿ ಪೊಲೀಸರಿಗೆ ಗರಿಷ್ಠ ಮಟ್ಟದ ಸೌಲಭ್ಯ ಅನುಷ್ಠಾನಕ್ಕೆ: ಸಿ.ಎಂ ಸಿದ್ದರಾಮಯ್ಯ
ಮುಂದಿನ ಬಜೆಟ್ ನಲ್ಲಿ ನಮ್ಮ ಪೊಲೀಸರಿಗೆ ಗರಿಷ್ಠ ಮಟ್ಟದ ಸೌಲಭ್ಯ ಹಾಗೂ ಭತ್ಯೆ ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮೂರು ದಿನಗಳ ಕಾಲ ನಡೆದ ಪೊಲೀಸ್ ಕರ್ತವ್ಯಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಇವತ್ತು ನಮ್ಮ ರಾಜ್ಯಕ್ಕೆ ಪೊಲೀಸ್ ಕರ್ತವ್ಯ ಕೂಟವನ್ನು ಆಯೋಜನೆ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ. ಇಲ್ಲಿಗೆ ಆಗಮಿಸಿ ಪ್ರಶಸ್ತಿ ಗೆದ್ದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದರಲ್ಲದೇ, ವಿಶೇಷವಾಗಿ ಬಿ.ಎಸ್.ಎಫ್, ಆರ್.ಪಿ.ಎಫ್, ಸಿ.ಆರ್.ಪಿ.ಎಫ್, ಅಸ್ಸಾಂ ರೈಫಲ್ ಇವರಿಗೆ ವಿಶೇಷ ಧನ್ಯವಾದವನ್ನು ಸಲ್ಲಿಸಿದರು. ಈ ಒತ್ತಡದ ಕೆಲಸದಲ್ಲೂ ನಮ್ಮ ಪೊಲೀಸರು ಸೈಬರ್ ಕ್ರೈಮ್, ಇಂಟರ್ ನ್ಯಾಷನಲ್ ಕ್ರೈಂ ಗಳಂತಹ ಪ್ರಕರಣ ಭೇದಿಸಿ ಸೈ ಎನಿಸಿಕೊಂಡಿದ್ದಾರೆ. ಮುಂದಿನ ಬಜೆಟ್ ನಲ್ಲಿ ನಮ್ಮ ಪೊಲೀಸರಿಗೆ ಗರಿಷ್ಠ ಮಟ್ಟದ ಸೌಲಭ್ಯ, ಭತ್ಯೆ ಹಾಗೂ ಯೊಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಈ ಬಾರಿ ಚಿನ್ನ ಗೆದ್ದ ಕರ್ನಾಟಕದ ಪೊಲೀಸರಿಗೆ 3 ಲಕ್ಷ ನಗದು ಹಾಗೂ ಬೆಳ್ಳಿ ಗೆದ್ದವರಿಗೆ 2 ಲಕ್ಷ ಹಾಗೂ ಕಂಚು ಗೆದ್ದವರಿಗೆ 1 ಲಕ್ಷ ರೂ. ನಗದನ್ನು ಬಹುಮಾನವಾಗಿ ಘೋಷಿಸಿದರು. ಈ ಬಾರಿ ಪೋಲಿಸ್ ಮೀಟ್`ನಲ್ಲಿ ಕರ್ನಾಟಕ 12 ಪದಕಗಳೊಟ್ಟಿಗೆ ಪ್ರಥಮ ಸ್ಥಾನ ಅಲಂಕರಿಸಿದರೆ. ಮಹಾರಾಷ್ಟ್ರ 8 ಪದಕಗಳೊಟ್ಟಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಪ್ರತ್ಯೇಕ ವಿಭಾಗಗಳಲ್ಲಿ ತೆಲಗಾಂಣ ಹೆಚ್ಚು ಪ್ರಶಸ್ತಿಯನ್ನು ಬಾಚಿಕೊಂಡಿದೆ.
ವೇದಿಕೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.