ಪ್ರಮುಖ ಸುದ್ದಿ

ವೈದ್ಯ ಶರತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ರವಿ ಮತ್ತವನ ಗ್ಯಾಂಗ್‌ ಗೆ ಜೀವಾವಧಿ ಶಿಕ್ಷೆ

ರಾಜ್ಯ( ಬೆಂಗಳೂರು)ಸೆ.5:-  ಕಳೆದ 9 ವರ್ಷಗಳ ಹಿಂದೆ ನಡೆದಿದ್ದ ವೈದ್ಯ ಶರತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ರವಿ ಮತ್ತವನ ಗ್ಯಾಂಗ್‌ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ನಗರದ ಸಿಸಿಹೆಚ್ 64 ರ ನ್ಯಾಯಧೀಶರಾದ ಎಸ್‌ಎಂ ಚನ್ನಪ್ಪನವರ್, ಜಿಮ್ ರವಿ, ಅಶ್ವತ್ಥ್, ಚೇತನ್, ಶಿವಪ್ರತಾಪ್, ಬೂಸೀಫ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ

ಸಂಜಯನಗರದ ಶ್ರೀಮಂತ ವೈದ್ಯ ಶರತ್ ಕುಮಾರ್ ಅವರನ್ನು ಹಣದಾಸೆಗೆ ಅಪಹರಿಸಿ ಕೊಲೆ ಮಾಡಿ ಅವರ ಬಳಿ ಇದ್ದ ಹಣ, ಚಿನ್ನ ದೋಚಿದ್ದರು. ನಂತರ ಶರತ್ ಅವರ ಕಾರ್ ಕೀ ಹಾಗೂ ಸ್ಪಲ್ಪ ಪ್ರಮಾಣದ ಚಿನ್ನವನ್ನು ದೇವರ ಹುಂಡಿಗೆ ಹಾಕಿ ಹತ್ಯೆ ಮಾಡಿದ ಪಾಪಕ್ಕೆ ಅಪರಾಧಿಗಳು ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಶವವನ್ನು ಕುಣಿಗಲ್ ಬಳಿ ಸುಟ್ಟು ಹಾಕಿದ್ದರು.

ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿ ಸಿಸಿಬಿ ಆರೋಪಪಟ್ಟಿ ಸಲ್ಲಿಸಿತ್ತು. ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ, ತಲಾ 87 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: