ಕರ್ನಾಟಕಪ್ರಮುಖ ಸುದ್ದಿ

ಪಿಎಚ್.ಡಿ ಪ್ರವೇಶ ಪರೀಕ್ಷೆ ಬರೆದ 91ರ ನಿವೃತ್ತ ಶಿಕ್ಷಕ!

ಕೊಪ್ಪಳ (ಸೆ.5): ನಿವೃತ್ತ ಶಿಕ್ಷಕರೊಬ್ಬರು 91 ರ ಇಳಿವಯಸ್ಸಿನಲ್ಲೂ ಪಿಎಚ್.ಡಿ ಪದವಿ ಪಡೆಯಲು ಪ್ರವೇಶಕ್ಕೆ ಅರ್ಹತಾ ಪರೀಕ್ಷೆ ಬರೆದಿರುವುದು ಇದೀಗ ರಾಜ್ಯದಲ್ಲಿ ಸುದ್ದಿಯಾಗಿದೆ.

ಹೌದು, ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಶರಣಬಸಪ್ಪ ಬಿಸರಹಳ್ಳಿ ಅವರು ತಮ್ಮ 91ನೇ ವಯಸ್ಸಿನಲ್ಲಿಯೂ ಹಂಪಿ ವಿಶ್ವವಿದ್ಯಾಯಲಯದಲ್ಲಿ ಪಿಎಚ್ ಡಿ ಪದವಿಗಾಗಿ ಅರ್ಜಿ ಸಲ್ಲಿಸಿದ್ದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಚನ ಸಾಹಿತ್ಯಕ್ಕೆ ಪಿಎಚ್.ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಫಲಿತಾಂಶ ಬಂದರೆ ಮುಂದೆ ಪಿಎಚ್.ಡಿ ಮಾಡಲು ಶರಣಬಸವರಾಜ ಬಿಸರಹಳ್ಳಿ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಹರೆಯದ ಯುವಕರನ್ನೂ ನಾಚಿಸುವಂತಹ ಸಾಹಸಕ್ಕೆ ಮುಂದಾಗಿದ್ದಾರೆ ಈ ಅಜ್ಜ. (ಎನ್.ಬಿ)

Leave a Reply

comments

Related Articles

error: