ಮೈಸೂರು

ನಗರದಲ್ಲಿ ಇಂದಿನಿಂದ ಸೊಮಾನಿ ಗ್ರಾಂಡೆ ಪ್ರದರ್ಶನ ಮಳಿಗೆ ಆರಂಭ

ಮೈಸೂರು,ಸೆ.5 : ಸೆರಾಮಿಕ್ಸ್ ಉದ್ಯಮದಲ್ಲಿ ದೇಶದ ಪ್ರತಿಷ್ಠಿತ ಕಂಪನಿಯಾದ ಸೊಮಾನಿ ಕಂಪನಿಯು ನಗರದ ಶ್ರೀನಿಧಿ ಐಕಾನ್ ಸ್ಕ್ವೇರ್ ಸಹಯೋಗದಲ್ಲಿ ಸೊಮಾನಿ ಗ್ರಾಂಡೆ ಎಂಬ ನೂತನ ಪ್ರದರ್ಶನ ಮಳಿಗೆಯನ್ನು ಇಂದು ಆರಂಭಿಸಲಾಗಿದೆ ಎಂದು ಶ್ರೀನಿಧಿ ಐಕಾನ್ ಸ್ಕ್ವೇರ್ ನ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಪ್ರಭಾಕರ ರಾವ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಳಿಗೆ ಬಗ್ಗೆ ವಿವರ ನೀಡಿ, ಹುಣಸೂರು ರಸ್ತೆಯ ಹಿನಕಲ್ ನ ಗ್ಲಿಟೋರಿಯಂ ಕಟ್ಟಡದಲ್ಲಿ ಆರಂಭವಾಗಿರುವ ನೂತನ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತ ಗೃಹೋಪಯೋಗಿ ವಸ್ತುಗಳಾದ ಸೆರಾಮಿಕ್ಸ್ ನ ಗೋಡೆ ಮತ್ತು ನೆಲದ ಹಾಸುಗಳು, ಡಿಜಿಟಲ್ , ಗ್ಲೇಜ್ಡ್ ವೆಟ್ರಿಫೈಡ್ ಪೈಲ್ಸ್, ಸ್ಯಾನಿಟರಿವೇರ್, ಬಾತ್ ಫಿಟ್ಟಿಂಗ್ಸ್ ಮುಂತಾದ ಅತಿಗುಣಮಟ್ಟ ವಸ್ತುಗಳು ಮಳಿಗೆಯಲ್ಲಿ ಲಭ್ಯವಿರಲಿವೆ ಎಂದು ಹೇಳಿದರು.

ಈ ಪ್ರದರ್ಶನ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಆತ್ಮಜ್ಞಾನಂದಜೀ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಸ್ಥರಾದ ಸುಬ್ರಮಣ್ಯ ರಾವ್, ಕ್ರೆಡೈ ಸಂಸ್ಥೆ ಅಧ್ಯಕ್ಷರಾದ ಚಿನ್ನಸ್ವಾಮಿ, ದಿ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಮುಖ್ಯಸ್ಥ ಚಂದ್ರಶೇಖರ್ ಮುಂತಾದವರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಸೊಮಾನಿ ಸೌತ್ ಮುಖ್ಯಸ್ಥ ನವೀನ್, ಸಹಾಯಕ ವ್ಯವಸ್ಥಾಪಕ ಸಿದ್ಧಾರ್ಥ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: