ಮೈಸೂರು

ಹಳಗನ್ನಡ ಗದ್ಯ ಸಾಹಿತ್ಯದ ಅವಲೋಕನ : ರಾಜ್ಯಮಟ್ಟದ ವಿಚಾರ ಸಂಕಿರಣ ನಾಳೆ

ಮೈಸೂರು,ಸೆ.5 : ಮೈವಿವಿಯ ಮಹಾರಾಜ ಕಾಲೇಜಿನ ಕನ್ನಡ ಸಂಘ, ಬೆಂಗಳೂರಿನ ಉದಯಭಾನು ಕಲಾಸಂಘದ ಉದಯಭಾನು ಭಾಷೆ-ಸಾಹಿತ್ಯ-ಸಂಸ್ಕೃತಿ ಅಧ್ಯಯನಾಂಗದ ಸಹಯೋಗದಲ್ಲಿ ‘ಹಳಗನ್ನಡ ಗದ್ಯ ಸಾಹಿತ್ಯದ ಅವಲೋಕನ’ ವಿಷಯವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸೆ.6ರ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತ ಅಧ್ಯಕ್ಷತೆ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌ.ಡೀನ್ ಡಾ.ನಾ.ಗೀತಾಚಾರ್ಯ, ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ, ಕಾಲೇಜಿನ ಕನ್ನಡ ವಿಭಾಗದ ಡಾ.ವಿಶ್ವನಾಥ, ಕನ್ನಡ ಸಂಘದ ಸಂಚಾಲಕಿ ಡಾ.ಡಿ.ವಿಜಯಲಕ್ಷ್ಮೀ ಇರುವರು.

ನಂತರ ನಡೆಯುವ ಗೋಷ್ಠಿಗಳಲ್ಲಿ ಪಂಚತಂತ್ರದ ಕಥಾತಂತ್ರದ ಬಗ್ಗೆ ಡಾ.ಬಿ.ಸಿ.ನಾಗೇಂದ್ರ ಕುಮಾರ್, ನಯಸೇನನ ಧರ್ಮಾಮೃತ ಕೃತಿಯ ಓದು ಮತ್ತು ವ್ಯಾಖ್ಯಾನ ಬಗ್ಗೆ ಡಾ.ಎಸ್.ಎಚ್.ಭುವನೇಶ್ವರಿ, ವಡ್ಡಾರಾಧನೆಯ ಕಥೆಗಳ ಹೊಸ ನೋಟದ ಬಗ್ಗೆ ಡಾ.ಎಚ್.ಎಸ್.ಸತ್ಯನಾರಾಯಣ, ಮಡ್ಡಾರಾಧನೆ ಕಥೆಗಳ ಭಾಷೆ ಮತ್ತು ಶೈಲಿ ಬಗ್ಗೆ ಡಾ.ಶೀಲಾದೇವಿ ಎಸ್. ಮಳಿಮಠ  ಇವರುಗಳು ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: