ಮೈಸೂರು

ಇಪ್ಪತ್ತೆರಡು ಕೃತಿಗಳ ಲೋಕಾರ್ಪಣೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಬೆಂಗಳೂರು ಮತ್ತು ರಂಗಾಯಣದ ವತಿಯಿಂದ ಮೈಸೂರಿನ ಭೂಮಿಗೀತಾ ಸಭಾಂಗಣದಲ್ಲಿ ಏರ್ಪಡಿಸಲಾದ ಬಹು ಭಾಷೆಗಳಲ್ಲಿ ಕುವೆಂಪು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅಸ್ಸಾಮಿ, ಇಂಗ್ಲಿಷ್, ಉರ್ದು, ಒಡಿಯಾ, ಕೊಂಕಣಿ, ಗುಜರಾತಿ, ತಮಿಳು, ತೆಲುಗು, ಪಂಜಾಬಿ, ಬಂಗಾಳಿ, ಮರಾಠಿ, ಹಾಗೂ ಮಲಯಾಳಂ ಭಾಷೆಗಳಿಗೆ ಅನುವಾದವಾಗಿರುವ ಒಟ್ಟು 22 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉತ್ತಮ ಕಾರ್ಯಗಳಿಂದ ಕನ್ನಡದ ತಿರುಳನ್ನು ಜಗತ್ತಿಗೆ ತಿಳಿಸಿದರು ಎಂದರು.

ಕುವೆಂಪು ಅವರು ಬರೆದಿರು ಕೃತಿಗಳ ಓದು ಇತ್ತೀಚೆಗೆ ಆರಂಭವಾಗಿದೆ. ಅನುವಾದಕರ ಶ್ರಮದಿಂದ ಅವರ ಕೃತಿಗಳು ಕರ್ನಾಟಕದಿಂದ ಹೊರದೇಶಗಳನ್ನು ಮುಟ್ಟುವಂತಾಗಿದೆ. ಕುವೆಂಪು ಅವರು ಕಟ್ಟಿಕೊಟ್ಟಿರುವ ಕಾವ್ಯಗಳಲ್ಲಿ ಅತ್ಯಂತ ಹೆಚ್ಚು ಆತ್ಮನಿರೀಕ್ಷಾಣ ಗುಣದಿಂದ ಕೂಡಿದ್ದು ಈ ಕಾರಣದಿಂದಾಗಿ ಓದುಗರಿಗೆ ಅವರು ಆಪ್ತರಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ಜಿ.ಎನ್. ದೇವಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ ನಾರಾಯಣ, ತಾರಿಣಿ ಚಿದಾನಂದಗೌಡ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕುಲಸಚಿವ ಈಶ್ವರ್ ಕು.ಮಿರ್ಜಿ, ರಂಗಾಯಣ ಉಪನಿರ್ದೇಶಕ ನಿರ್ಮಲ ಮಠಪತಿ ಉಪಸ್ಥಿತರಿದ್ದರು.

Leave a Reply

comments

Related Articles

error: