ಮೈಸೂರು

ಭಾರತೀಯ ಸೇನೆಯ ಹುದ್ದೆಗಳ ನೇಮಕಾತಿಗೆ ರ್ಯಾಲಿ

ಮೈಸೂರು,ಸೆ.5-ಭಾರತೀಯ ಸೇನೆಗೆ ಸೈನಿಕ ಹುದ್ದೆಗಳ ನೇಮಕಾತಿಗಾಗಿ ಮಂಡ್ಯದ ಸ್ಪೋರ್ಟ್ಸ್ ಸ್ಟೇಡಿಯಂ ನಲ್ಲಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸೈನಿಕ-ಜಿಡಿ ಹುದ್ದೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.45 ಅಂಕ ಪಡೆದಿರಬೇಕು ಮತ್ತು ಎಲ್ಲ ವಿಷಯದಲ್ಲಿ ಶೇ.33 ಅಂಕ ಪಡೆದಿರಬೇಕು. ವಯೋಮಿತಿ 1 ಅಕ್ಟೋಬರ್ 1997 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 166 ಸೆಂ.ಮೀ ತೂಕ 50 ಕೆಜಿ ಎದೆ ಅಳತೆ 77 ಉಬ್ಬಿಸಿದಾಗ 5 ಸೆಂ.ಮೀ ಇರಬೇಕು.

ಸೈನಿಕ-ಟೆಕ್ನೀಕಲ್ ಹುದ್ದೆಗೆ ಪಿಯುಸಿ ಪಿಸಿಎಂ ಮತ್ತು ಇಂಗ್ಲೀಷ್ ನೊಂದಿಗೆ ಶೇ.50 ಅಂಕ ಪಡೆದಿರಬೇಕು. ಎಲ್ಲ ವಿಷಯದಲ್ಲೂ ಶೇ.40 ಅಂಕ ಪಡೆದಿರಬೇಕು. ವಯೋಮಿತಿ 1 ಅಕ್ಟೋಬರ್ 1995 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 165 ಸೆಂ.ಮೀ ತೂಕ 50 ಕೆಜಿ ಎದೆ ಅಳತೆ 77 ಉಬ್ಬಿಸಿದಾಗ 5 ಸೆಂ.ಮಿ ಇರಬೇಕು.

ಸೈನಿಕ-ಟೆಕ್ನೀಕಲ್ (ವಾಯುಯಾನ ಸಾಮಾಗ್ರಿ ಪರೀಕ್ಷಕ) ಹುದ್ದೆಗೆ ಪಿಯುಸಿ ಪಿಸಿಎಂ ಮತ್ತು ಇಂಗ್ಲಿಷ್ ನೊಂದಿಗೆ ಶೇ.50 ಅಂಕ ಪಡೆದಿರಬೇಕು. ಎಲ್ಲ ವಿಷಯದಲ್ಲೂ ಶೇ.40 ಅಂಕ ಪಡೆದಿರಬೇಕು. 3 ವರ್ಷದ ಡಿಪ್ಲೋಮ ಇಂಜಿನಿಯರಿಂಗ್ (ಮ್ಯಾಕಾನೀಕಲ್, ಎಲೆಕ್ಟ್ರೀಕಲ್, ಆಟೋಮೋಬೈಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನೀಕ್ ಎಂಡ್ ಕಮ್ಯೂನೀಕೇಷನ್ ತೇರ್ಗಡೆ) ಮಾಡಿರಬೇಕು. ವಯೋಮಿತಿ 1 ಅಕ್ಟೋಬರ್ 1995 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 165 ಸೆಂ.ಮೀ ತೂಕ 50 ಕೆಜಿ ಎದೆ ಅಳತೆ 77 ಉಬ್ಬಿಸಿದಾಗ 5 ಸೆಂ.ಮಿ ಇರಬೇಕು.

ಸೈನಿಕ-ನರ್ಸಿಂಗ್ ಅಸಿಸ್ಟೆಂಟ್ ಸೋಲ್ಡಜರ್ ಟೆಕ್ನೀಕಲ್ ಡ್ರಸ್ಸರ್ಸ (ಆರ್‍ವಿಸಿ) ಹುದ್ದೆಗೆ ಪಿಯುಸಿ ಪಿಸಿಬಿ ಮತ್ತು ಇಂಗ್ಲೀಷ್ ನೊಂದಿಗೆ ಶೇ.50 ಅಂಕ ಪಡೆದಿರಬೇಕು. ಎಲ್ಲ ವಿಷಯದಲ್ಲೂ ಶೇ.40 ಅಂಕ ಪಡೆದಿರಬೇಕು. ಬಿಎಸ್ಸಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ವಿಜ್ಞಾನ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. ವಯೋಮಿತಿ 1 ಅಕ್ಟೋಬರ್ 1995 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 165 ಸೆಂ.ಮೀ ತೂಕ 50 ಕೆಜಿ ಎದೆ ಅಳತೆ 77 ಉಬ್ಬಿಸಿದಾಗ 5 ಸೆಂ.ಮಿ ಇರಬೇಕು.

ಸೈನಿಕ-ಟ್ರೆಡ್ ಮ್ಯಾನ್ ಚೇಫ್, ಮೆಸ್ ಕೀಪರ್, ಹೌಸ್ ಕೀಪರ್, ಟೈಲರ್, ಸರ್ಪೋಟ್ ಸ್ಟಾಫ್ ಹಾಗೂ Dresser ಹುದ್ದಗೆ ಎಸ್‍ಎಸ್‍ಎಲ್‍ಸಿ, ಐಟಿಐ ಅಥವಾ 8ನೇ ತರಗತಿ ಉತ್ತೀರ್ಣರಾಗಿರಬೇಕು. ವಯೋಮಿತಿ 1 ಅಕ್ಟೋಬರ್ 1995 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 166 ಸೆಂ.ಮೀ ತೂಕ 40 ಕೆಜಿ ಎದೆ ಅಳತೆ 76 ಉಬ್ಬಿಸಿದಾಗ 5 ಸೆಂ.ಮಿ ಇರಬೇಕು.

ಸೈನಿಕ-ಕ್ಲರ್ಕ, ಸ್ಟೋರ್ ಕೀಪರ್, ಟೆಕ್ನೀಕಲ್ ಇನ್‍ವೆಂಟ್ರಿ ಮ್ಯಾನೇಜ್ ಮೇಂಟ್ ಹುದ್ದೆಗೆ ಪಿಯುಸಿಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆ, ಪದವಿಧರರು ಅರ್ಹರು, ವಯೋಮಿತಿ 1 ಅಕ್ಟೋಬರ್ 1995 ರಿಂದ 1 ಏಪ್ರಿಲ್ 2001 ರೊಳಗೆ ಹುಟ್ಟಿದವರಾಗಿರಬೇಕು. ದೇಹದಾಡ್ರ್ಯತೆ ಎತ್ತರ 162 ಸೆಂ.ಮೀ ತೂಕ 50 ಕೆಜಿ ಎದೆ ಅಳತೆ 77 ಉಬ್ಬಿಸಿದಾಗ 5 ಸೆಂ.ಮಿ ಇರಬೇಕು.

ಅಭ್ಯರ್ಥಿಯು ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಮೊದಲು ಆನ್-ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆನ್-ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆಧಾರ್ ಮತ್ತು ಇ-ಮೆಲ್ ಐಡಿ ಕಡ್ಡಾವಾಗಿರುತ್ತದೆ. ರ್ಯಾಲಿ ಅಡ್ ಮಿಟ್ ಕಾರ್ಡ್ ನೋಂದಾಯಿತ ಇ-ಮೇಲ್ ಐಡಿಗೆ ಕಳುಹಿಸುತ್ತಾರೆ ಇದನ್ನು ಡೌನ್ ಲೋಡ್ ಮಾಡಿಕೊಂಡು ನೇಮಕಾತಿ ರ್ಯಾಲಿಗೆ ಭಾಗವಹಿಸುವುದು.

ಹೆಚ್ಚಿನ ಮಾಹಿತಿಗಾಗಿ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ರವರನ್ನು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. ಕಚೇರಿಯ ದೂ.ಸಂ.0821-2489972  ಅಥವಾ ಹೆಚ್ಚಿನ ಮಾಹಿತಿ ಹಾಗೂ ಆನ್-ಲೈನ್ ಮೂಲಕ ನೋಂದಾಯಿಸಲು WWW.JOININDIANARMY.NIC.IN ಗೆ ಭೇಟಿ ನೀಡಬಹುದು. (ಎಂ.ಎನ್)

 

Leave a Reply

comments

Related Articles

error: