ಸುದ್ದಿ ಸಂಕ್ಷಿಪ್ತ

ಸಕ್ಕರೆ ಕಾಯಿಲೆಗೆ ಸೂಕ್ತ ಪರಿಹಾರ : ಉಪನ್ಯಾಸ

ಮೈಸೂರು,ಸೆ.5 : ಬೆಳಕು ಫೌಂಡೇಷನ್ ಸಂಸ್ಥೆಯ ವತಿಯಿಂದ ಸಕ್ಕರೆ ಕಾಯಿಲೆಗೆ ಸೂಕ್ತ ಪರಿಹಾರ ಎಂಬ ವಿಷಯದ ಬಗ್ಗೆ ಎರಡು ದಿನಗಳ ಉಚಿತ ಉಪನ್ಯಾಸ ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಪುರಂನ ಪರಿವರ್ತನದಲ್ಲಿ ಏರ್ಪಡಿಸಲಾಗಿದೆ.

ಸೆ.8ರಂದು ಸಂಜೆ 6.30 ರಿಂದ 8ರವರೆಗ ಹಾಗೂ ಸೆ.9ರಂದು ಬೆಳಗ್ಗೆ 10.30 ರಿಂದ 12ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಕ್ಕರೆ ಕಾಯಿಲೆಗೆ ಪರ್ಯಾಯ ಚಿಕಿತ್ಸೆ ಬಗ್ಗೆ ಕೆ.ಎಸ್.ಮುಕಂದನ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: