ಸುದ್ದಿ ಸಂಕ್ಷಿಪ್ತ

ಸೆ.8ರಂದ ಶನೇಶ್ವರ ಸ್ವಾಮಿಯ ರಥೋತ್ಸವ

ಮೈಸೂರು,ಸೆ.5 : ಇಲವಾಲ ಹೋಬಳಿಯ ದೊಡ್ಡ ಮಾರಗೌಡನಹಳ್ಳಿಯಲ್ಲಿ ಶ್ರಾವಣ ಮಾಸದ ಕೊನೆ ಶನಿವಾರದಂದು ಶ್ರೀ ಶನೇಶ್ವರ ಸ್ವಾಮಿಯ 50ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸೆ.7 ಮತ್ತು 8ರವರೆಗೆ ನಡೆಯುವಲಿದೆ. ಮೊದಲ ದಿನದ ವಿಶೇಷ ಪೂಜಾ ಕೈಂಕರ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹವಾಚನ, ಉತ್ಸವ ಮೂರ್ತಿಯ ಪ್ರತಿಷ್ಟಾಂಗ ಕಳಶ ಸ್ಥಾಪನೆ ಕಲಾತತ್ವ ಹೋಮ, ವಾಸ್ತು ಹೋಮ, ದಿಗ್ಬಲಿ ನಡೆಸಲಾಗುವುದು.

ಸೆ.8ರ ಬೆಳಗ್ಗೆ 7 ಗಂಟೆಗೆ ಕಲಾವಾಹನೆ, ಅಭಿಷೇಕ ನವಗ್ರಹ ಹೋಮ, ಶನಿಶಾಂತಿ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ ಮತ್ತು ಬೆಳ್ಳಿ ಮಹಾರಥೋತ್ಸವ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: