ಮೈಸೂರು

ಮೈಸೂರಿನ ಅರಮನೆ ಪ್ರವೇಶಿಸಿದ ಅರ್ಜುನ ನೇತೃತ್ವದ ಗಜಪಡೆಗೆ ಮಂಗಳ ವಾದ್ಯಗಳ ಮೂಲಕ ಭವ್ಯ ಸ್ವಾಗತ

ಮೈಸೂರು,ಸೆ.5:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ  ಮೈಸೂರಿನ ಅರಮನೆ ಪ್ರವೇಶಿಸಿದ ಅರ್ಜುನ ನೇತೃತ್ವದ ಗಜಪಡೆಗೆ ಮಂಗಳ ವಾದ್ಯಗಳ ಮೂಲಕ ಭವ್ಯ ಸ್ವಾಗತ ಕೋರಲಾಯಿತು.

ಅರಣ್ಯ ಭವನದಿಂದ ಕಾಲ್ನಡಿಗೆ ಮೂಲಕ ಜಯಮಾರ್ತಾಂಡ ದ್ವಾರದ  ಮೂಲಕ ಅರಮನೆ ಪ್ರವೇಶಿಸಿದ ಗಜಪಡೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಜಿಲ್ಲಾಡಳಿತ ಬರ ಮಾಡಿಕೊಂಡಿತು. ಅರಮನೆ ಪ್ರವೇಶಿಸಿದ ಗಜಪಡೆಗೆ ವಿಶೇಷ ಪೂಜೆ  ಸಲ್ಲಿಸಲಾಯಿತು. ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದಿಕ್ಷೀತ ಅವರು ಗಜ ಪಡೆಗಳಿಗೆ ವಿಶೇಷ ಪೂಜೆ‌‌‌ ಸಲ್ಲಿಸಿದರು. ಇದೇ ವೇಳೆ  ಜಾನಪದ ಕಲಾ ತಂಡಗಳು ಕ್ಯಾಪ್ಟನ್ ಅರ್ಜುನ ಟೀಂಗೆ ಭವ್ಯ ಸ್ವಾಗತ ಕೋರಿದವು. ಹಾಗೆಯೇ ಮೈಸೂರು ನಗರ ಪೋಲಿಸ್ ಬ್ಯಾಂಡ್ ಕೂಡ ಭಾಗಿಯಾಗಿತ್ತು. ಪೋಲಿಸ್ ಪಡೆಗಳು  ಗಜಪಡೆಯನ್ನು ವಿಶೇಷವಾಗಿ ಬರ ಮಾಡಿಕೊಂಡರು.

ಸ್ವಾಗತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ,ಶಾಸಕ ಎಲ್ ನಾಗೇಂದ್ರ,ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಸಚಿವ ಜಿ.ಟಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಆಗಮಿಸಿ ದಸರಾ ಆನೆಗಳನ್ನು ಸ್ವಾಗತಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: