ಪ್ರಮುಖ ಸುದ್ದಿ

ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ಗೆ 24.32 ಲಕ್ಷ ರೂ. ನಿವ್ವಳ ಲಾಭ

ರಾಜ್ಯ(ಮಡಿಕೇರಿ) ಸೆ.5 : – ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 105.72 ಕೋಟಿ ರೂ.ಗಳ ವಹಿವಾಟು ನಡೆಸುವುದರೊಂದಿಗೆ 24.32 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.14ರಷ್ಟು ಲಾಭಾಂಶ ನೀಡುವುದಾಗಿ ಘೋಷಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ಯಾಂಕ್‍ನ ಅಧ್ಯಕ್ಷ ಬಿ.ಕೆ.ಜಗದೀಶ್ ಅವರು, ಬ್ಯಾಂಕ್ ಪ್ರಸಕ್ತ 2297 ಮಂದಿ ಸದಸ್ಯರುಗಳನ್ನು ಹೊಂದಿದ್ದು,  ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ.101.30 ಲಕ್ಷ ಸಂಗ್ರಹವಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ  ರೂ. 3121.20 ಲಕ್ಷದಷ್ಟಿದ್ದು, ಕಳೆದ ಸಾಲಿಗಿಂತ ರೂ.210.30 ಲಕ್ಷದಷ್ಟು ಅಧಿಕಗೊಂಡಿದೆ ಎಂದು ತಿಳಿಸಿದರು. ಬ್ಯಾಂಕು 2017-18ನೇ ಸಾಲಿಗೆ ಒಟ್ಟಾರೆ 49.14 ಲಕ್ಷದಷ್ಟು ಲಾಭಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರ ಬಾಪ್ತುಗಳಿಗೆ ಕಾಯ್ದಿರಿಸಿದ ಬಳಿಕ 24.32 ಲಕ್ಷ ರೂ.ಗಳ   ಲಾಭ ಗಳಿಸಿದೆ ಎಂದರು. ಸಂಸ್ಥೆಯು ಪ್ರಸಕ್ತ  2864.51 ಲಕ್ಷ ರೂ.ಗಳಷ್ಟು  ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ.172.65 ಲಕ್ಷದಷ್ಟು ಏರಿಕೆ ಉಂಟಾಗಿದೆ.  ಅಲ್ಲದೆ ತಾನು ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಡಿಪಾಜಿûಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾಪೆರ್Çರೇಷನ್‍ನಲ್ಲಿ ವಿಮೆ ಇಳಿಸಲಾಗಿದೆ.  ಬ್ಯಾಂಕು ತನ್ನ ದ್ರವ್ಯಾಸ್ತಿಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬರಲಾಗುತ್ತಿದ್ದು,  ರೂ.741.35 ಲಕ್ಷದಷ್ಟು ಬೆಲೆಯ ಚಿನ್ನಾಭರಣಗಳನ್ನು ಈಡಿನ ಮೂಲಕ ಹೊಂದಿದೆ ಎಂದು ವಿವರಿಸಿದರು.

ಸುಮಾರು ರೂ.1446.03 ಲಕ್ಷದಷ್ಟು ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ವಿನಿಯೋಗಿಸಲಾಗಿದ್ದು, ಸರ್ಕಾರಿ ಭದ್ರತಾ ಪತ್ರದಲ್ಲಿ ರೂ.994/- ಲಕ್ಷದಷ್ಟು ಧನ ವಿನಿಯೋಗಿಸಲಾಗಿದ್ದು, 304.07 ಲಕ್ಷ ಜಾಮೀನು ಸಾಲ  410.09 ಲಕ್ಷ ರೂ.ಗಿರವಿ ಸಾಲ, ಸೇರಿದಂತೆ ಗ್ರಾಹಕರಿಗೆ 1552.66 ಲಕ್ಷ ರೂ.ಗಳನ್ನು ವಿವಿಧ ರೂಪದ ಸಾಲವಾಗಿ ನೀಡಿದೆ.  ಒಟ್ಟು ಸಾಲ ನೀಡಿಕೆಯಲ್ಲಿ `ಅನುತ್ಪಾದಕ ಆಸ್ತಿಯ (ಎನ್‍ಪಿಎ) ಪ್ರಮಾಣ  ರೂ.3.11 ಲಕ್ಷ (ಶೇ.0.20)ಆಗಿದ್ದು,  ಬ್ಯಾಂಕಿನ ಸಾಲದ ಒಟ್ಟಾರೆ ವಸೂಲಾತಿ  ಶೇಕಡಾ 98.12ರಷ್ಟಾಗಿದೆ. ಬ್ಯಾಂಕು ಆರ್ ಬಿ ಐ ನಿಯಮದಂತೆ ರೂ.627.62 ಲಕ್ಷದಷ್ಟು ಸಾಲವನ್ನು ಆದ್ಯತಾ ವಲಯಕ್ಕೆ ನೀಡಿದೆ ಎಂದರು.

ಬ್ಯಾಂಕು ತನ್ನ ಜಿ.ಟಿ ರಸ್ತೆ ಶಾಖೆಯಲ್ಲಿ ರೂ.2554.38 ಲಕ್ಷದಷ್ಟು ವ್ಯವಹಾರ ನಡೆಸಿದ್ದು, ರೂ.12.64 ಲಕ್ಷದಷ್ಟು ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ ರೂ. 599.46 ಲಕ್ಷ ಠೇವಣಿ ಹೊಂದಿದ್ದು ರೂ.377.93 ಲಕ್ಷದಷ್ಟು ವಿವಿಧ ಸಾಲ ನೀಡಿದೆ. ಹಾಗೂ ಸದಸ್ಯರುಗಳಿಗೆ ಬ್ಯಾಂಕಿನ ಸೌಲಭ್ಯ ನೀಡುವುದರೊಂದಿಗೆ, ಶಾಖೆಯ ವ್ಯವಹಾರಗಳನ್ನು ವೃದ್ಧಿಸಿ, ಹೆಚ್ಚು ಲಾಭದಾಯಕವಾಗಿ ಅಭಿವೃದ್ಧಿ ಹೊಂದಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕು ತನ್ನ ಗ್ರಾಹಕರಿಗೆ ಜಾಮೀನು ಸಾಲ, ಆಭರಣ ಸಾಲ, ಮನೆ ಖರೀದಿ ಸಾಲ, ವಾಹನ ಖರೀದಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿ 100 ದಿನದ ಸಾಲವನ್ನು   ಗ್ರಾಹಕರಿಗೆ ನೀಡುತ್ತಿದ್ದು,  ಬ್ಯಾಂಕಿನಲ್ಲಿಡುವ ಠೇವಣಾತಿಗಳಿಗೆ ಕನಿಷ್ಟ ಶೇಕಡಾ 4 ರಿಂದ ಗರಿಷ್ಠ ಶೇಕಡಾ 7.25 ವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಅಲ್ಲದೆ ಹಿರಿಯ ನಾಗರಿಕರಿಗೆ, ಒಂದು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಇಡುವ  ಠೇವಣಿಗಳಿಗೆ ಶೇಕಡಾ 0.50 ಹೆಚ್ಚಿನ ಬಡ್ಡಿ ನೀಡುತ್ತಿದೆ ಎಂದು ಜಗದೀಶ್ ವಿವರಿಸಿದರು.

ಬ್ಯಾಂಕ್‍ನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿ  ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬ್ಯಾಂಕ್‍ನ 2017-18ನೇ ಸಾಲಿನ ಮಹಾಸಭೆ ಮಡಿಕೇರಿ ಕೊಡವ ಸಮಾಜದಲ್ಲಿ ಸೆ.8ರಂದು ನಡೆಯಲಿದೆ. ಬ್ಯಾಂಕಿನ ಸಮಗ್ರ ಬೈಲಾ ತಿದ್ದುಪಡಿಯನುಸಾರ, ಸದಸ್ಯರಾದವರು ಕನಿಷ್ಟ ಒಂದು ಸಾವಿರ ರೂ.ಗಳ ಪಾಲು ಹಣ ಹಾಗೂ 2500 ರೂ.ಗಳ ಕನಿಷ್ಟ ಠೇವಣಿ ಹೊಂದಿರಬೇಕು. ಮತ್ತು ತಮ್ಮ ಚಾಲ್ತಿ ಅಥವಾ ಉಳಿತಾಯ ಖಾತೆಗಳಲ್ಲಿ ವಾರ್ಷಿಕ ಕನಿಷ್ಟ ಎರಡು ವ್ಯವಹಾರಗಳನ್ನು ನಡೆಸಬೇಕು ಎಂದು ಜಗದೀಶ್ ಹೇಳಿದರು.

ಸದಸ್ಯನು ಹಿಂದಿನ 5 ವಾರ್ಷಿಕ ಮಹಾಸಭೆಗಳ ಪೈಕಿ 3 ಸಭೆಗಳಿಗೆ ಕಡ್ಡಾಂiÀiವಾಗಿ ಹಾಜರಾಗಬೇಕು ಅಥವಾ 3 ನಿರಂತರ ವರ್ಷಗಳಲ್ಲಿ ಮೇಲಿನ ಯಾವುದೇ ರೀತ್ಯಾ ವ್ಯವಹಾರ ನಡೆಸದಿದ್ದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದರು. ಆರ್‍ಬಿಐ ಪರಿವೀಕ್ಷಣೆ ಮತ್ತು ಆಡಿಟ್ ವರ್ಗೀಕರಣದಲ್ಲಿ ಬ್ಯಾಂಕ್ ‘ಎ’  ದರ್ಜೆಯಲ್ಲಿರುವುದ ಬ್ಯಾಂಕಿನ ಪ್ರಗತಿಗೆ ನಿದರ್ಶನವಾಗಿದೆ ಎಂದು ಜಗದೀಶ್ ಹೆಮ್ಮೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಎಂ.ಪಿ.ಮುತ್ತಪ್ಪ, ಕೋಡಿ ಚಂದ್ರಶೇಖರ್, ಇಗ್ಗುಡ ಶಿವಕುಮಾರಿ ಗಣಪತಿ, ಬಿ.ಎಂ.ರಾಜೇಶ್ ಹಾಗೂ ಸಿ.ಕೆ.ಬಾಲಕೃಷ್ಣ ಉಪಸ್ಥಿತರಿದ್ದರು.     (ಕೆಸಿಐ,ಎಸ್.ಎಚ್)

Leave a Reply

comments

Related Articles

error: