ಪ್ರಮುಖ ಸುದ್ದಿ

ಮರಕ್ಕೆ ಬೈಕ್ ಡಿಕ್ಕಿ : ವ್ಯಕ್ತಿ ಸಾವು : ಹುದಿಕೇರಿ ಗ್ರಾಮದಲ್ಲಿ ಘಟನೆ

ರಾಜ್ಯ(ಮಡಿಕೇರಿ) ಸೆ.5 : – ಮರವೊಂದಕ್ಕೆ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬಾತ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.

ಹುದಿಕೇರಿಯ ಏಳನೇ ಮೈಲಿನ ನಿವಾಸಿ ದಿ.ನಾಚಪ್ಪನವರ ಮಗ ನೆಲ್ಲಮಾಡ ಚೇತನ್(31) ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ಹುದಿಕೇರಿಯ ತನ್ನ ಮನೆಗೆ ಬರುತ್ತಿದ್ದ ಚೇತನ್‍ರ ಹತೋಟಿ ತಪ್ಪಿದ  ಬೈಕ್ ರಸ್ತೆ ಬದಿಯ ಮರವೊಂದಕ್ಕೆ  ಡಿಕ್ಕಿಯಾಗಿತ್ತು. ಇದರಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಚೇತನ್‍ರನ್ನು ತಕ್ಷಣ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರು, ಚಿಕಿತ್ಸೆ ಫಲಕಾರಿಯಾಗದೆ ಅವರು  ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: