ಪ್ರಮುಖ ಸುದ್ದಿ

ಆಕಸ್ಮಿಕ ಅಗ್ನಿ ಅನಾಹುತ : ಮನೆ ಸಂಪೂರ್ಣ ಭಸ್ಮ

ರಾಜ್ಯ(ಮಂಡ್ಯ)ಸೆ.6:-  ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿ ಮನೆ ಸಂಪೂರ್ಣ  ಭಸ್ಮಗೊಂಡ ಘಟನೆ ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ನಡೆದಿದೆ.

ಸಾತನೂರು ಗ್ರಾಮದ ಟೈಲರ್ ವೃತ್ತಿ ಮಾಡಿಕೊಂಡಿದ್ದ ಆನಂದ್ ಎಂಬವರಿಗೆ ಸೇರಿದ‌ ಮನೆಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹರಡಿದ ಪರಿಣಾಮ ಸಂಪೂರ್ಣ ಮನೆ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದು ಅವರು ಬರುವಷ್ಟರಲ್ಲಿಯೇ ಮನೆ  ಪೂರ್ಣ ಭಸ್ಮವಾಗಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: