ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಸೆ.6:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 KV ದೇವನೂರು (ಮೈಸೂರು) ಹಾಗೂ ರಾಜೀವ್ ನಗರ   ವಿದ್ಯುತ್ ವಿತರಣಾ ಕೇಂದ್ರದಲ್ಲಿ ವತಿಯಿಂದ 2ನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಹಾಗೂ ದಸರಾ ಪೂರ್ವ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 6 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ರಾಜೀವ್‍ನಗರ 1, 2 ಮತ್ತು 3ನೇ ಹಂತ, ಶಾಂತಿನಗರ, ನೆಹರೂನಗರ, ರಾಧಕೃಷ್ಣನಗರ, ಭಾರತ್ ನಗರ, ಜೆ.ಎಸ್.ಎಸ್. ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭೂಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್ ವರ್ಕ್ಸ್ , ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ನಾರಾಯಣ ಹೃದಯಾಲಯ, ರಾಜೀವ್‍ನಗರ 2ನೇ ಹಂತ, ಅಲ್ಬದರ್ ಮಸೀದಿ, ಸೂರ್ಯನಾರಾಯಣ ದೇವಸ್ಥಾನ, ಕ್ರಿಶ್ಚಿಯನ್ ಕಾಲೋನಿ ಹಾಗೂ ಸುತ್ತ-ಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: