ಸುದ್ದಿ ಸಂಕ್ಷಿಪ್ತ

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

ಮೈಸೂರು,ಸೆ.6-ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2018-19ನೇ ಸಾಲಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ಪೂರ್ವ 1 ರಿಂದ 10ನೇ ತರಗತಿಗೆ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ರಾಜ್ಯದ ವಿದ್ಯಾರ್ಥಿವೇತನ ತಂತ್ರಾಂಶ ssp.karnataka.gov,in ರಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನ.

ಪೋಷಕರ ವಾರ್ಷಿಕ ಆದಾಯ ಮಿತಿ 1 ರಿಂದ 8ನೇ ತರಗತಿಯವರೆಗೆ 6 ಲಕ್ಷದೊಳಗಿರಬೇಕು, 9 ರಿಂದ 10ನೇ ತರಗತಿಯವರೆಗೆ 2.5 ಲಕ್ಷದೊಳಗಿರಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ SATS-ID (ಸಂಬಂಧಪಟ್ಟ  ಶಾಲೆಗಳಿಂದ), ಪೋಷಕರ ಮೊಬೈಲ್ ಸಂಖ್ಯೆ, ವಿದ್ಯಾರ್ಥಿಯ ಆಧಾರ್ ಸಂಖ್ಯೆ /ಇ.ಐ.ಡಿ.,  ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಪಾಸ್‍ಪುಸ್ತಕ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಈಗಾಗಲೇ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಲ್ಲಿ ಹಿಂದಿನ ವರ್ಷದ ಆನ್‍ಲೈನ್ ನೋಂದಣಿ ಸಂಖ್ಯೆ, ಪೋಷಕರು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿದ್ದಲ್ಲಿ ಸಂಬಂಧಿಸಿದ ದಾಖಲೆ(ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪುರಸಭೆ/ನಗರಸಭೆಗಳಿಂದ) ದಾಖಲೆಗಳು ಅವಶ್ಯಕವಿರುತ್ತದೆ.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಹಾಗೂ  ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಮುರುಗಾದೇವಿ ದೇವಸ್ಥಾನದ ಎದುರು, ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದ ಆವರಣ, ನಜರ್‍ಬಾದ್, ಮೈಸೂರು -10, ದೂ.ಸಂ. 0821-2520910 ಅನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: