ಮೈಸೂರು

ಗ್ರಾಮೀಣಾಭಿವೃದ್ಧಿ ಮಾಹಿತಿ ಪಡೆದ ಸಂಸದೀಯ ತಂಡ

ಮೈಸೂರಿನ ರ್ಯಾಡಿಷನ್ ಬ್ಲ್ಯೂ ಹೋಟೆಲ್ ನಲ್ಲಿ ಹನ್ನೊಂದು ಮಂದಿ ಸದಸ್ಯರನ್ನೊಳಗೊಂಡ ಸಂಸದೀಯ ಸಮಿತಿಯು ಗ್ರಾಮೀಣಾಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿತು.

ಡಾ.ಪಿ.ವೇಣುಗೋಪಾಲ್ ನೇತೃತ್ವದಲ್ಲಿ ಆಗಮಿಸಿದ ತಂಡ ಗ್ರಾಮೀಣ ಅಭಿವೃದ್ಧಿ ಕುರಿತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು. ಹನ್ನೊಂದು ಮಂದಿಯ ತಂಡವು ಸಂಸದರಾದ ಹರೀಶ್ ಚಂದ್ರ ಚವಾಣ್, ಗೋಕರಾಜು ಗಂಗರಾಜು, ಜುಗಲ್ ಕಿಶೋರ್ ಶರ್ಮ, ಡಾ.ಯಶವಂತ್ ಸಿಂಗ್, ಲಾಡು ಕಿಶೋರ್ ಸ್ವೇನ್, ವಿಜಯಕುಮಾರ್ ಹನ್ಸಡಕ್, ಸಂಜಯರ್ ಧೋತ್ರೆ, ಬಲ್ಕಾ ಸುಮನ್, ಶಮ್ಸೇರ್ ಸಿಂಗ್ ಡಲ್ಲೋ, ನಾರಾಯಣಲಾಲ್ ಪಂಚಾರಿಯಾರನ್ನು ಒಳಗೊಂಡಿತ್ತು.

ಇದಕ್ಕೂ ಮುನ್ನ ತಂಡವು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಹಾಗೂ ಕಿರಂಗೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾನಾ ಕಾಮಗಾರಿಗಳ ಕುರಿತು ಪರಿಶೀಳನೆ ನಡೆಸಿದೆ.

ಮೈಸೂರಿಗೆ ತಂಡ ಆಗಮಿಸಿದಾಗ ಜಿಲ್ಲಾಪಂಚಾಯತ್ ಸಿಇಓ ಶಿವಶಂಕರ್ ಮತ್ತು ವಿವಿಧ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Leave a Reply

comments

Related Articles

error: