ಮೈಸೂರು

ವರದಕ್ಷಿಣೆ ತರುವಂತೆ ಪತಿಯಿಂದ ಕಿರುಕುಳ ಮನನೊಂದ ಗೃಹಿಣಿ ಆತ್ಮಹತ್ಯೆ

ಮೈಸೂರು,ಸೆ.6:- ಪತಿ ವರದಕ್ಷಿಣೆ ತರುವಂತೆ ನಿತ್ಯ ಕಿರುಕುಳ ನೀಡುತ್ತಿದ್ದರಿಂದ ಮನನೊಂದ ಗೃಹಿಣಿಯೋರ್ವರು  ಆತ್ಮಹತ್ಯೆ ಮಾಡಿಕೊಂಡ ಘಟನೆ  ಮೈಸೂರು ತಾಲೂಕಿನ ದೊಡ್ಡಕಾಟೂರಿನಲ್ಲಿ ನಡೆದಿದೆ.

ಮೃತರನ್ನು  ಮೂಲತಃ ತಿ.ನರಸೀಪುರ ತಾಲೂಕಿನ ಗಣಗನೂರು ಗ್ರಾಮದ ಮಹದೇವಮ್ಮ(25) ಎಂದು ಹೇಳಲಾಗಿದೆ. ಮೂಲತಃ ತಿ.ನರಸೀಪುರ ತಾಲೂಕಿನ ಗಣಗನೂರು ಗ್ರಾಮದ ಮಹದೇವಮ್ಮ ಅವರನ್ನು ಎರಡೂವರೆ ವರ್ಷಗಳ ಹಿಂದೆ ಶಂಕರ್​ಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಶಂಕರ್ ನಿತ್ಯ ಕುಡಿದು ಬಂದು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಮೃತ ಮಹದೇವಮ್ಮ ಪೋಷಕರು ಆರೋಪಿಸಿದ್ದಾರೆ. ಧಾನ್ಯಗಳ ಸಂರಕ್ಷಣೆಗೆ ಬಳಸುವ ವಿಷಾಂಶವುಳ್ಳ ಮಾತ್ರೆ ಸೇವಿಸಿ ಮಹದೇವಮ್ಮ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ  ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: