ಮೈಸೂರು

ನಂಬಿಸಿ 4.4 ಲಕ್ಷ ರೂಪಾಯಿ ಹಣ ವಂಚನೆ : ದೂರು ದಾಖಲು

6 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು 40 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದ ಪತ್ರಿಕೆ ಜಾಹೀರಾತು ನಂಬಿ ವ್ಯಕ್ತಿಯೊಬ್ಬ ವಂಚಿನೆಗೊಳಗಾದ ಘಟನೆ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಿರಣ್ ಟೆಕ್ನಾಲಜಿಸ್ ಎನ್ನುವ ಕಂಪನಿಯೇ ಪತ್ರಿಕೆಯಲ್ಲಿ ಜಾಹೀರಾತು ನೀಡುವ ಮೂಲಕ ಅಮಾಯಕರನ್ನು ಸೆಳೆಯುತ್ತಿದ್ದು ಜಾಲಕ್ಕೆ ಸಿಲುಕಿದ ಸಾಹುಕಾರ್ ಚೆನ್ನಯ್ಯ ರಸ್ತೆ ನಿವಾಸಿ ಶ್ರೀಕಾಂತ ಎನ್ನುವವರನ್ನು ವಂಚಿಸಿದೆ. ಶ್ರೀಕಾಂತ್ 4.4ಲಕ್ಷ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕಂಪನಿ ಘೋಷಿಸಿದಂತೆ ಮಾಸಿಕ ಹಣವೂ ನೀಡದೆ, ಹೂಡಿಕೆ ಹಣವನ್ನು ನೀಡದೆ ವಂಚಿಸಿದೆ, ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಕಂಪನಿಯೂ ತರಬೇತಿ ಕೌಶಲ ಒದಗಿಸುವುದಾಗಿ ಸಭೆ ನಡೆಸಿದ್ದಾರೆ. ಇದಕ್ಕೆ ಮರುಳಾದ ಶ್ರೀಕಾಂತ್ ಹಣವನ್ನು ಠೇವಣಿ ಇಟ್ಟಿದ್ದಾರೆ.

ವಂಚನೆಯ ಪ್ರಕರಣವನ್ನು ಠಾಣೆಯಲ್ಲಿ ದಾಖಲಿಸಲಾಗಿದ್ದು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

comments

Related Articles

error: