ಮೈಸೂರು

ತೆರಾಪಂಥ್ ಯುವಕ್ ಪರಿಷತ್ ನಿಂದ ನೆರೆ ಸಂತ್ರಸ್ಥರಿಗೆ ಪರಿಹಾರ ಕಿಟ್ ವಿತರಣೆ

ಹೆಚ್ಚಿನ ಸಹಾಯಕ್ಕೆ ಸದಾ ಸಿದ್ಧ

ಮೈಸೂರು,ಸೆ.6 : ನಗರದ ಅಖಿಲ ಭಾರತಿಯ ತೆರಾಪಂಥ್ ಯುವಕ್ ಪರಿಷತ್ ವತಿಯಿಂದ ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ಥರಿಗೆ ಪರಿಹಾರದ ಕಿಟ್ ಅನ್ನು ವಿತರಿಸಲಾಗಿದ್ದು, ಇನ್ನೂ ಹೆಚ್ಚಿನ ಸೇವೆ ನೀಡಲು ಸಂಸ್ಥೆಯು ಸದಾ ಸಿದ್ಧವಿರುವುದಾಗಿ ಸಂಸ್ಥೆಯ ಅಧ್ಯಕ್ಷ ಮುಖೇಶ್ ಗೊಗ್ಲಿಯಾ ತಿಳಿಸಿದರು.

ನೆರೆ ಸಂತ್ರಸ್ಥರಿಗೆ ಅವಶ್ಯವಿರುವ ದಿನಬಳಕೆ ವಸ್ತುಗಳಾದ ಹೊದಿಕೆ, ಟೀ-ಶರ್ಟ್, ಲುಂಗಿ, ನೈಟಿ, ಟವಲ್, ಸೊಳ್ಳೆ ಪರದೆ, ಮೇಣದಬತ್ತಿ, ಸ್ಟೀಲ್ ತಟ್ಟೆ, ಡೆಟಾಲ್ ಕಿಟ್ ಸೇರಿದಂತೆ ದಿನಸಿ ಪದಾರ್ಥಗಳುಳ್ಳ 800 ಪರಿಹಾರ ಕಿಟ್ ಅನ್ನು ಈಗಾಗಲೇ ಸಂಸ್ಥೆಯು ವಿತರಿಸಲಾಗಿದ್ದು ಇನ್ನೂ ಹೆಚ್ಚಿನ ಕಿಟ್ ವಿತರಿಸಲು ಆಸಕ್ತಿ ಹೊಂದಿದ್ದು ನೆರೆ ಸಂತ್ರಸ್ಥರೊ ಅಥವಾ ಸಂಬಂಧಿಸಿದವರು ತಮ್ಮನ್ನು ಸಂಪರ್ಕಿಸಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ತೆರಾಪಂಥ್ ಟಾಸ್ಕ್ ಪೋರ್ಸ್ ವತಿಯಿಂದ ರಾಷ್ಟ್ರೀಯ ವಿಪತ್ತು ಅಥವಾ ಇನ್ನಿತರೆ ಅವಗಡದ ಸಮಯದಲ್ಲಿ ಕಟಿಬದ್ಧರಾಗಿ ಸೇವೆ ನೀಡಲಿದ್ದೇವೆ, ಈ ನಿಟ್ಟಿನಲ್ಲಿ ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ಥರ ಸಹಯ ಹಸ್ತ ಚಾಚಲಾಗಿದೆ. ಆದರೆ ಒಳ ಪ್ರದೇಶದಲ್ಲಿರುವ ಸಂತ್ರಸ್ಥರನ್ನು ಭೇಟಿ ಮಾಡದೇ ಸಾಧ್ಯವಾಗದೆ ಇರುವುದು ನೋವು ನೀಡಿದ್ದು, ಆದ್ದರಿಂದ ಅವಶ್ಯವಿರುವವರಿಗೆ ಸಹಾಯ ಮಾಡಲಾಗುವುದು ಎಂದು ಘೋಷಿಸಿದರು. ಮಾಹಿತಿಗೆ ಮೊ.ಸಂ. 9901135937, 9886501094, 9844363237, 9886501094 ಸಂಪರ್ಕಿಸಬಹುದು.

ಸಂಸ್ಥೆಯು 1965 ರಿಂದ ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 35 ವರ್ಷಗಳಿಂದ ಅಸ್ಥಿತ್ವದಲ್ಲಿರುವ ಯುವ ಘಟಕದ ವತಿಯಿಂದ  ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ವಿಪತ್ತು ನಿರ್ವಹಣೆಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಮೋದ್ ಮೆಹ್ತಾ, ಮಹಾವೀರ್ ದೇರಾಸರಿಯಾ, ಸುನೀಲ್ ದೇರಾಸರಿಯಾ, ರಾಹುಲ್ ನೊಲ್ಖಾ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: