ಮೈಸೂರು

ಮಗುವಿನ ಚಿಕಿತ್ಸೆಗೆ ಪ್ರಧಾನಿ ಪರಿಹಾರ ನಿಧಿಯಿಂದ ಹಣ ಸಹಾಯ

ಕುವೆಂಪುನಗರದ ಕೆಎಚ್‍ಬಿ ಕಾಲೋನಿಯ 2ನೇ ಹಂತದ ಎಲ್‍ಐಜಿ 35ರ ನಿವಾಸಿ ಗುರುಸಿದ್ದಪ್ಪ ಅವರ ಎರಡೂವರೆ ವರ್ಷದ ಪುತ್ರ ಸಚ್ಚಿತ್ ಜಿ. ನಾವಳ್ಳಿ ಕಿವಿ ಚಿಕಿತ್ಸೆಗೆ ಸಂಸದ ಪ್ರತಾಪ್ ಸಿಂಹ  ಅವರ ಶಿಫಾರಸಿನ ಮೇರೆಗೆ ಪ್ರಧಾನಿಗಳ ಪರಿಹಾರ ನಿಧಿಯಿಂದ 3 ಲಕ್ಷ ಬಿಡುಗಡೆ ಮಾಡಲಾಗಿದೆ.

ಹುಟ್ಟಿನಿಂದಲೂ ಕಿವಿ ಕೇಳಿಸದೆ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆಗೆ ತಗುಲುವ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಸಂಸದ ಪ್ರತಾಪ್ ಸಿಂಹ ಅವರಲ್ಲಿ ಮೊರೆ ಹೋದರು. ಮನವಿಗೆ ಸ್ಪಂದಿಸಿದ ಸಂಸದರು, ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಪ್ರಧಾನಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿಸಿದರು. ಮಗುವಿಗೆ ಯಶಸ್ವಿಯಾಗಿ ಕ್ಲಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿಸಲಾಗಿದ್ದು, ಆರೋಗ್ಯವಾಗಿದೆ ಎನ್ನಲಾಗಿದೆ.

Leave a Reply

comments

Related Articles

error: