ಮನರಂಜನೆ

ಗಂಡು ಮಗುವಿಗೆ ಜನ್ಮ ನೀಡಿದ ನಟ ಶಾಹಿದ್ ಪತ್ನಿ ಮೀರಾ

ಮುಂಬೈ,ಸೆ.6-ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜ್ ಪೂತ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಮೀರಾ ರಜ್ ಪೂತ್ ಗೆ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ಎರಡನೇ ಮಗುವಿನ ಜನನದಿಂದ ನಟ ಶಾಹಿದ್ ಪತ್ನಿ ಮೀರಾ ಸಂತಸದಲ್ಲಿದ್ದಾರೆ.

2015 ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಶಾಹಿದ್ ಕಪೂರ್ ಹಾಗೂ ಮೀರಾ ಕಾಲಿಟ್ಟರು. ಈ ದಂಪತಿಗೆ ಈಗಾಗಲೇ ಎರಡು ವರ್ಷದ ಹೆಣ್ಣು ಮಗುವಿದೆ. 2016 ರ ಆ.26 ರಂದು ಹೆಣ್ಣು ಮಗುವಿಗೆ ಮೀರಾ ಜನ್ಮ ನೀಡಿದ್ದರು. ಸದ್ಯ ಸಂತಸದಲ್ಲಿ ಇರುವ ಶಾಹಿದ್-ಮೀರಾ ದಂಪತಿಗೆ ಬಾಲಿವುಡ್ ತಾರೆಯರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. (ಎಂ.ಎನ್)

Leave a Reply

comments

Related Articles

error: