ದೇಶಪ್ರಮುಖ ಸುದ್ದಿ

ಒಂಭತ್ತು ತಿಂಗಳ ಮೊದಲೇ ವಿಧಾನ ಸಭೆ ವಿಸರ್ಜಿಸಿ,ರಾಜಕೀಯ ಸಂಚಲನ ಸೃಷ್ಟಿಸಿದ ತೆಲಂಗಾಣ ಮುಖ್ಯಮಂತ್ರಿ

ದೇಶ(ತೆಲಂಗಾಣ)ಸೆ.6:- ತೆಲಂಗಾಣದಲ್ಲಿ ಮುಖ್ಯಮಂತ್ರಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ರಾಜಕೀಯ ಸಂಚಲನ ಸೃಷ್ಟಿಸಿದ್ದು, ಒಂಭತ್ತು ತಿಂಗಳ ಮೊದಲೇ ವಿಧಾನ ಸಭೆ ವಿಸರ್ಜಿಸಿ ದೇಶದ ಗಮನವನ್ನೇ ತಮ್ಮ ತ್ತ ಸೆಳೆದಿದ್ದಾರೆ.

ನಿನ್ನೆ ನಡೆದ ಸಚಿವ ಸಭೆಯಲ್ಲಿ ವಿಧಾನ ಸಭೆ  ವಿಸರ್ಜಿಸಲು ತೀರ್ಮಾನಿಸಿ, ರಾಜ್ಯಪಾಲ ನರಸಿಂಹನ್ ಅವರಿಗೆ ವಿಸರ್ಜಿಸುತ್ತಿರುವುದಾಗಿ ತಿಳಿಸಿದರಲ್ಲದೇ ತೀರ್ಮಾನದ ಪ್ರತಿಯನ್ನು ನೀಡಿದರು. ರಾಜ್ಯಪಾಲರು ತೀರ್ಮಾನದ ಪ್ರತಿಯನ್ನು ಪರಿಶೀಲಿಸಿ ತಮ್ಮ ಒಪ್ಪಿಗೆ ನೀಡಿದ್ದು, ತೆಲಂಗಾಣ ರಾಜ್ಯ ನಿರ್ಮಾಣವಾದ ಮೇಲೆ ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜನೆಗೊಂಡು ಇತಿಹಾಸ ನಿರ್ಮಿಸಿದೆ.ಡಿಸೆಂಬರ್ ನಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ.

ಚಂದ್ರಶೇಖರ್ ರಾವ್ ಅವರು ಜ್ಯೋತಿಷಿಗಳ ಮಾತನ್ನು ನಂಬುತ್ತಿದ್ದು, 6 ಅವರ ಲಕ್ಕಿ ನಂಬರ್ ಅಂತೆ. ಅದರಂತೆ 6ನೇ ತಾರೀಖಿನಂದು ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: