ದೇಶಪ್ರಮುಖ ಸುದ್ದಿ

ಪಂಜಾಬ್‍ ಲಾಟರಿ ಬಹುಮಾನ: ಇನ್ನೂರು ರೂ. ಸಾಲ ಮಾಡಿ 1.2 ಕೋಟಿ ಗಳಿಸಿದ ಭೂಪ!

ಲುಧಿಯಾನ (ಸೆ.6): ಲಾಟರಿ ಕೊಳ್ಳಲು ಹಣವಿಲ್ಲದೇ ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಲಾಟರಿ ಕೊಂಡುಕೊಂಡವನೊಬ್ಬ ಈಗ ಕೋಟ್ಯಧಿಪತಿಯಾಗಿದ್ದಾನೆ. ಇವನ ಅದೃಷ್ಟ ಎಂತಾದ್ದು ನೋಡಿ, ಆತನ ಲಾಟರಿ ನಂಬರ್ ಗೆದ್ದ ನಂಬರ್‌ಗೆ ಮ್ಯಾಚ್ ಆಗಿದ್ದರಿಂದ ಈತ ಈಗ ಬರೋಬ್ಬರಿ 1.2 ಕೋಟಿ ರೂಪಾಯಿ ಒಡೆಯ.

ಪಂಜಾಬ್ ಸರ್ಕಾರದ ಪಂಜಾಬ್ ಸ್ಟೇಟ್ ಲಾಟರಿಯನ್ನು 200 ರೂ. ಸಾಲ ಮಾಡಿ ಕೊಂಡು ಕೊಂಡಿದ್ದ ಮನೋಜ್ ಕುಮಾರ್ ಎಂಬ ವ್ಯಕ್ತಿಗೆ ಬಂಪರ್ ಬಹುಮಾನ ಬಂದಿದ್ದು, ಈ ಬಹುಮಾನದ ಮೊತ್ತ ಈತ ಬರೋಬ್ಬರಿ 1.2 ಕೋಟಿ ರೂ.ಗಳು!

ಸಾಮಾನ್ಯ ಕಾರ್ಮಿಕನಾಗಿರುವ ಮನೋಜ್ ಕುಮಾರ್, ಲಾಟರಿ ಕೊಳ್ಳಲು ದುಡ್ಡಿಲ್ಲದೆ ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಲಾಟರಿ ಪಡೆದಿದ್ದ. ಸದ್ಯ ಮನೋಜ್ ಕುಮಾರ್‌ಗೆ 1.2 ಕೋಟಿ ರೂ ಲಾಟರಿ ಬಹುಮಾನ ಲಭಿಸಿದ್ದು, ಆದಷ್ಟು ಶೀಘ್ರವಾಗಿ ಈ ಹಣವನ್ನು ಮನೋಜ್ ಕುಮಾರ್‌ಗೆ ನೀಡುವುದಾಗಿ ಪಂಜಾಬ್ ಸ್ಟೇಟ್ ಲಾಟರಿ ನಿರ್ದೇಶಕ ಟಿಪಿಎಸ್ ಫೂಲ್ಕಾ ಅವರು ಸ್ಪಷ್ಟಪಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: