ಮೈಸೂರು

‘ಸುಗ್ಗಿ ಸಂಭ್ರಮದಲ್ಲಿ-ಇಷ್ಟ ರಂಗೋಲಿ’ ಸ್ಪರ್ಧೆ ಜ.1ರಂದು

ಮನ್ವಂತರ ಸಮೂಹ ಬಳಗದಿಂದ ಜನವರಿ 1ರ ಹೊಸವರ್ಷ ದಿನದಂದು ‘ಸುಗ್ಗಿ ಸಂಭ್ರಮದಲ್ಲಿ’ – ಇಷ್ಟ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಅಧ್ಯಕ್ಷ ವೆಂಕಟರಾಮ್ ಕಶ್ಯಪ್ ‘ಸಿಟಿಟುಡೆ’ಗೆ ತಿಳಿಸಿದರು.

ಭಗಿನಿ ಸೇವಾ ಸಮಾಜದ ಆವರಣದಲ್ಲಿ ಬೆಳಗ್ಗೆ 11 ರಿಂದ ಸ್ಪರ್ಧೆಯ ನಡೆಯಲಿದ್ದು, ಈ ಸಂದರ್ಭದಲ್ಲಿ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳೆಯರು ಒಂದು ಗಂಟೆ ಕಾಲಮಿತಿಯೊಳಗೆ ತಮ್ಮಿಷ್ಟದಂತೆ (ಬಣ್ಣ, ಹೂವು, ಮಣ್ಣು-ಮರಳು) ಯಾವುದೇ ತರಹ ರಂಗೋಲಿಗಳನ್ನಾದರೂ ಹಾಕಬಹುದು. ಆಸಕ್ತರು ಡಿ.26 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 953852253 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: