ಮೈಸೂರು

ದಕ್ಷಿಣ ವಲಯದ 55 ಪಿಎಸ್ ಐಗಳ ವರ್ಗಾವಣೆ

ಮೈಸೂರು,ಸೆ.6-ಪೊಲೀಸ್ ಇಲಾಖೆಯಿಂದ ದಕ್ಷಿಣ ವಲಯದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಟ್ಟು 55 ಮಂದಿಯನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಮೈಸೂರು ಜಿಲ್ಲೆಯಿಂದ ನಂಜನಗೂಡು ಪಟ್ಟಣ ಠಾಣೆಯ ಸಿ.ವೀರಭದ್ರಪ್ಪ (ಅಪರಾಧ) ಅವರನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ, ಬನ್ನೂರು ಠಾಣೆಯ ಡಿ.ಕೆ.ಲತೇಶ್ ಕುಮಾರ್ ಅವರನ್ನು ಗುಂಡ್ಲುಪೇಟೆ ಠಾಣೆಗೆ, ಬೈಲುಕುಪ್ಪೆ ಠಾಣೆಯ ಪಿ.ಲೋಕೇಶ್ ಅವರನ್ನು ಬೆಟ್ಟದಪುರ ಠಾಣೆಗೆ, ಬೆಟ್ಟದಪುರ ಠಾಣೆಯ ಚಿಕ್ಕಸ್ವಾಮಿ ಅವರನ್ನು ವರುಣಾ ಠಾಣೆಗೆ, ವರುಣಾ ಠಾಣೆಯ ಬಿ.ಎನ್.ಸಂದೀಪ್ ಕುಮಾರ್ ಅವರನ್ನು ಹುಲ್ಲಹಳ್ಳಿ ಠಾಣೆಗೆ, ಟಿ.ಎನ್.ಪುರ ಠಾಣೆಯ ಆನಂದ್ ಅವರನ್ನು ಬನ್ನೂರು ಠಾಣೆಗೆ, ನಂಜನಗೂಡು ಗ್ರಾಮಾಂತರ ಠಾಣೆಯ ಟಿ.ಎಂ.ಪುನೀತ್ ಅವರನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ, ಸರಗೂರು ಠಾಣೆಯ ಎಂ.ಬಸವರಾಜು ಅವರನ್ನು ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ ಠಾಣೆಗೆ, ಬಿಳಿಗೆರೆ ಠಾಣೆಯ ಸತೀಶ್ ಅವರನ್ನು ಮಂಡ್ಯ ಜಿಲ್ಲೆಯ ಅರಕೆರೆ ಠಾಣೆಗೆ, ನಂಜನಗೂಡು ಸಂಚಾರಿ ಠಾಣೆಯ ಎನ್.ಆನಂದ್ ಅವರನ್ನು ನಂಜನಗೂಡು ಟೌನ್ ಠಾಣೆಗೆ, ನಂಜನಗೂಡು ಟೌನ್ ಠಾಣೆಯ ಸಿ.ವಿ.ಸವಿ ಅವರನ್ನು ಜಿಲ್ಲೆಯ ಎಕನಾಮಿಕ್ಸ್ ಅಫೆನ್ಸ್ ವಿಂಗ್ ಗೆ, ಪಿರಿಯಾಪಟ್ಟಣ ಠಾಣೆಯ ರವಿಕಿರಣ್ ಅವರನ್ನು ಚಾಮರಾಜನಗರ ಗ್ರಾಮಾಂತರ ಠಾಣೆಗೆ, ಹುಣಸೂರು ಗ್ರಾಮಾಂತರ ಠಾಣೆಯ ಪುಟ್ಟಸ್ವಾಮಿ ಅವರನ್ನು ಚಾಮರಾಜನಗರ ಪೂರ್ವ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಅಜರುದ್ದೀನ್ ಅವರನ್ನು ಮೈಸೂರಿನ ಟಿ.ಎನ್.ಪುರ ಠಾಣೆ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಬಿ.ಎನ್.ಪುನೀತ್ ಅವರನ್ನು ನಂಜನಗೂಡು ಗ್ರಾಮಾಂತರ ಠಾಣೆಗೆ, ಮಂಡ್ಯ ಸಂಚಾರಿ ಠಾಣೆ-2ರ ಬಿ.ಎಂ.ಶಿವಮ್ಮ ಅವರನ್ನು ನಂಜನಗೂಡು ಸಂಚಾರಿ ಠಾಣೆಗೆ, ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಸಿ.ರವಿಶಂಕರ್ ಅವರನ್ನು ಮೈಸೂರು ಜಿಲ್ಲೆಯ ಎಫ್ ಎಂಎಸ್ ಗೆ, ಹಳೇಬೀಡು ಠಾಣೆಯ ರೇಣುಕಾ ಪ್ರಸಾದ್ ಅವರನ್ನು ಮೈಸೂರು ಜಿಲ್ಲೆಯ ಎಕ್ಸೈಸ್/ಲಾಟರಿ ಮತ್ತು ಐಟಿ ಆಕ್ಟ್, ಹಾಸನ ಜಿಲ್ಲೆಯ ಯಸಳೂರು ಠಾಣೆಯ ವಿ.ವಿ.ದಯಾನಂದ್ ಅವರನ್ನು ಮೈಸೂರು ಜಿಲ್ಲೆ ಡಿಸಿಆರ್ ಬಿ ಗೆ, ಹಾಸನ ಜಿಲ್ಲೆ ಟೆಕ್ನಿಕಲ್ ಸೆಲ್ ಅಂಡ್ ಸೈಬರ್ ಕ್ರೈಂನ ಯಾಸ್ಮಿನ್ ತಾಜ್ ಅವರನ್ನು ಮೈಸೂರು ಜಿಲ್ಲೆಯ ಆರ್ಗನೈಜಡ್ ಕ್ರೈಂ ಅಂಡ್ ನಾರ್ಕೋಟಿಕ್ಸ್ ಆಂಟಿ ವುಮೆನ್ ಟ್ರಾಫಿಕಿಂಗ್ ವಿಂಗ್ ಗೆ ವರ್ಗಾವಣೆ ಮಾಡಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಕೆ.ವಿ.ಶರತ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರ್ಗಾವಣೆಗೊಂಡಿರುವ ಪಿಎಸ್ ಐ ಅವರುಗಳನ್ನು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ನಿಯುಕ್ತಿಗೊಳಿಸಿರುವ ಸ್ಥಳಗಳಲ್ಲಿ ತಕ್ಷಣ ವರದಿ ಮಾಡಿಕೊಳ್ಳುವಂತೆ ಸೂಚಿಸಬೇಕೆಂದು ತಿಳಿಸಲಾಗಿದೆ. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: