ಮೈಸೂರು

ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಅವರಿಗೆ ತಾತಯ್ಯ ಪ್ರಶಸ್ತಿ

ಮೈಸೂರು,ಸೆ.6 : ನಗರದ ಅನಾಥಾಲಯದಿಂದ ಕೊಡಮಾಡಲ್ಪಡುವ ‘ತಾತಯ್ಯ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಅವರು ಭಾಜನರಾಗಿದ್ದಾರೆ.

ರಾಜ್ಯದ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈಶ್ವರ ದೈತೋಟ ಅವರು ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆ, ನಿಯತಕಾಲಿಕೆಗಳಲ್ಲಿ ದುಡಿದಿದ್ದಾರೆ, ಇದರೊಂದಿಗೆ 75 ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಅನುವಾದಿಸಿದ್ದಾರೆ, ಜೊತೆಗೆ ವಿದೇಶಿ ಜರ್ನಲ್ ಗಳಲ್ಲಿಯೂ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಇವರಿಗೆ ಸೆ.8ರಂದು ಶಾರದಾ ವಿಲಾಸ ಕಾಲೇಜಿನ ಆವರಣದಲ್ಲಿರುವ ಎಂ.ವೆಂಕಟಕೃಷ್ಣಣ್ಣಯ್ಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

comments

Related Articles

error: