
ಲೈಫ್ & ಸ್ಟೈಲ್
ಮೊಟ್ಟೆ ತಿನ್ನಿಸಿ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಿ
ಮೊಟ್ಟೆ ಒಂದು ಸಂಪೂರ್ಣ ಆಹಾರ. ಇದರಲ್ಲಿರುವ ನ್ಯೂಟ್ರಿಯಾಂಟ್ಸ್ ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಸಹಾಯಕವಾಗಿದೆ. ಮಕ್ಕಳ ಇಷ್ಟಾನುಸಾರ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿಯೂ ನೀಡಬಹುದು.
ಮೊಟ್ಟೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲರಿಯಿದ್ದು ಮಕ್ಕಳಲ್ಲಿ ಬೊಜ್ಜು ಬೆಳೆಯುವುದಿಲ್ಲ. ಮಕ್ಕಳಿಗೆ ಬೇಯಿಸಿದ ಮೊಟ್ಟೆಯನ್ನು ನೀಡಿ. ಇದರಲ್ಲಿ ಪ್ರೋಟೀನ್ ಹೇರಳವಾಗಿರುವುದರಿಂದ ಶರೀರದ ಬೆಳವಣಿಗೆ ಶೀಘ್ರವಾಗುತ್ತದೆ. ಅರ್ಧ ಫ್ರೈ ಮಾಡಿದ ಆಮ್ಲೆಟ್ ತಿನ್ನಿಸಿ. ಇದರಲ್ಲಿರುವ ಕೊಲಿನ್ ಅಂಶವು ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಬೇಯಿಸಿದ ಮೊಟ್ಟೆಯಲ್ಲಿ ಸ್ವಲ್ಪ ಕಾಳುಮೆಣಸಿನ ಹುಡಿ ಬೆರೆಸಿ ತಿನ್ನಿಸಿ. ಇದರಲ್ಲಿರುವ ಸೆಲೆನಿಯಂ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಗ್ಲಾಸ್ ಹಾಲು ಮತ್ತು ಮೊಟ್ಟೆ ತಿನ್ನಿಸಿ. ಮೊಟ್ಟೆಯಲ್ಲಿರುವ ಲ್ಯೂಟಿನ್ ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಮೊಟ್ಟೆಗೆ ಸ್ವಲ್ಪ ಕಪ್ಪು ಉಪ್ಪು ಬೆರೆಸಿ ತಿನ್ನಲು ನೀಡಿ.
ಕಬ್ಬಿಣದ ಅಂಶ ಹೇರಳವಾಗಿದ್ದು, ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಮೊಟ್ಟೆಯನ್ನು ಸಲಾಡ್ ಜೊತೆ ಮಿಕ್ಸ್ ಮಾಡಿ ತಿನ್ನಲು ಕೊಡಿ. ಮೊಟ್ಟೆಯಲ್ಲಿ ವಿಟಾಮನ್ ಡಿ ಅಂಶ ಹೇರಳವಾಗಿದ್ದು, ಎಲುಬುಗಳು ಗಟ್ಟಿಯಾಗುತ್ತವೆ. ಮೊಟ್ಟೆಯ ಜೊತೆ ಬಾದಾಮಿ ಅಥವಾ ಒಂದು ಗ್ಲಾಸ್ ಹಾಲನ್ನು ನೀಡಿ. ಇದರಲ್ಲಿರುವ ಫಾಸ್ಪರಸ್ ಆಂಶವು ದಂತಪಂಕ್ತಿಯನ್ನು ಬಲಿಷ್ಠಗೊಳಿಸುತ್ತದೆ. ವಸಡುಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಅರ್ಧ ಬೇಯಿಸಿದ ಮೊಟ್ಟೆ ತಿನ್ನಲು ಕೊಡಿ. ಇದರಲ್ಲಿರುವ ಅಮಿನೋ ಆ್ಯಸಿಡ್ ಶಕ್ತಿಯನ್ನು ಹೆಚ್ಚಿಸುತ್ತದೆ. ನಟ್ಸ್ ಜೊತೆ ಮೊಟ್ಟೆ ಸೇವಿಸಲು ನೀಡಿ.
ಈ ರೀತಿ ಮಕ್ಕಳಿಗೆ ಪ್ರತಿದಿನ ಮೊಟ್ಟೆ ತಿನ್ನಿಸಿದಲ್ಲಿ ನಿಮ್ಮ ಮಗು ಕುಶಾಗ್ರಮತಿ ಆಗುವುದರೊಂದಿಗೆ ಆರೋಗ್ಯಯುತವಾಗಿ ಬೆಳೆಯಲಿದೆ.