ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಸೆ.7:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆವಿ ಎಫ್.ಟಿ.ಎಸ್ ಮತ್ತು 66/11 ಕೆವಿ ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಅಶೋಕ ರಸ್ತೆ ಮತ್ತು ಲಷ್ಕರ್ ಮೊಹಲ್ಲಾ, ತಿಲಕ ನಗರ, ಕೈಲಾಸಪುರಂ,  ಮಿಷನ್ ಆಸ್ಪತ್ರೆ, ಗಾಂಧಿ ವೃತ್ತ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ.ಸ್ಟ್ರೀಟ್, ದೊಡ್ಡ ಒಕ್ಕಲಿಗರ ಬೀದಿ, ಇರ್ವಿನ್ರ ರಸ್ತೆ, ಸಯ್ಯಾಜಿರಾವ್ ರಸ್ತೆ, ಒಲಂಪಿಯಾ ಟಾಕೀಸ್, ಪುಲಿಕೇಶಿ ರಸ್ತೆ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ರಾಜ್‍ಕಮಲ್ ಟಾಕೀಸ್ ಹಾಗೂ ಸಿದ್ದಿಖ್ ನಗರ, ಶ್ರೀ ಶಿವರಾತ್ರೀಶ್ವರ ನಗರ, ಕೊಲಂಬಿಯಾ ಏಷಿಯಾ, ಹನುಮಂತನಗರ, ಹುಡ್ಕೋ ‘ಡಿ’ ಲೇಔಟ್, ಕೆ.ಎಸ್.ಆರ್.ಟಿ.ಸಿ ಲೇಔಟ್, ಇಂಡಸ್ಟ್ತಿಯಲ್ ‘ಬಿ’ ಲೇಔಟ್, ಹೈವೇ ಸರ್ಕಲ್, ಸ್ಟಾರ್ ಆಫ್ ಮೈಸೂರು, ಫರಹಾ ಕಾಂಪೌಂಡ್ ಮತ್ತು ಕಾವೇರಿ ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: