ಮೈಸೂರು

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ : ಮಾಜಿ ಸಚಿವ ವಿ.ಸೋಮಣ್ಣ

ಮೈಸೂರು,ಸೆ.7:- ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬಳಿಕ ಮೊದಲ ಬಾರಿಗೆ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಮಾಜಿ ಸಚಿವ, ಶಾಸಕ ವಿ.ಸೋಮಣ್ಣ  ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಿನ್ನೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪಕ್ಷದ ಬಲವರ್ಧನೆ ಮತ್ತು ವೈಯುಕ್ತಿಕವಾಗಿ ನಂಜನಗೂಡಿನ ನಂಜುಂಡ ಶಕ್ತಿ ನೀಡಲಿ ಆಶೀರ್ವಾದ ನೀಡಲಿ ಎನ್ನುವ ದೆಸೆಯಿಂದ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನಮಿಸಿದ್ದೇನೆ ಎಂದರು. ರಾಜ್ಯ ದಲ್ಲಿ  ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರ್ಕಾರ ಈಗಾಗಲೇ  ತಲೆ ಕೆಳಗಾಗುವ ಪರಿಸ್ಥಿತಿಯಲ್ಲಿದೆ .ಯಾವ ವೇಳೆಯಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂಬುದು ತಿಳಿಯದು . ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳು ಇಂದಿಗೂ ಹೆಸರಾಗಿ ಉಳಿದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಲು ರಾಜ್ಯದ ದೇಶದ ಜನರು ಬಯಸಿದ್ದಾರೆ ನರೇಂದ್ರ ಮೋದಿ ಯವರು ಮತ್ತೆ ಪ್ರಧಾನಿಯಾಗುತ್ತಾರೆ. ಭಾರತ ದೇಶವನ್ನು ಹತ್ತನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ. ಇಂದು ಅಭಿವೃದ್ಧಿ ಹೊಂದಿರುವ ಅಮೆರಿಕ ರಾಷ್ಟ್ರಗಳು ಭಾರತ ದೇಶದ ಅಭಿವೃದ್ಧಿಯನ್ನು ನೋಡಿ ಪ್ರಧಾನಿ ಮೋದಿಯವರ ಮೇಲೆ ಅಪಾರ ಗೌರವ ನಂಬಿಕೆ ಇಟ್ಟಿದ್ದಾರೆ. ಭಾರತ ದೇಶದ ಯುವಜನರು ಮೋದಿಯವರ ಕಾರ್ಯಕ್ರಮಗಳನ್ನು ನೋಡಿ ಅವರ ಅಭಿವೃದ್ಧಿಯನ್ನು ಹಂಬಲಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿಯ ಪ್ರಮುಖರು ಶಾಸಕರ ಜೊತೆಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: