ಮೈಸೂರು

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ತಾಲೀಮು ಆರಂಭ

ಮೈಸೂರು,ಸೆ.7:-  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2018ರ ಪ್ರಯುಕ್ತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ತಾಲೀಮು ಆರಂಭವಾಗಿದೆ.

ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡವಿಂದು ತಾಲೀಮಿನಲ್ಲಿ ಪಾಲ್ಗೊಂಡಿದ್ದು, ಅರಮನೆ ಅಂಗಳದಿಂದ ಗಜಪಡೆಗಳು ಹೊರಟಿವೆ. ಬನ್ನಿಮಂಟಪದವರೆಗೆ ಸಾಗಲಿದ್ದು, ಕೆ.ಆರ್.ವೃತ್ತ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಬೊಂಬು ಬಜಾರ್ , ಹೈವೇ ವೃತ್ತದ ಮೂಲಕ ಸಾಗಿವೆ. ಎರಡು ದಿನಗಳ ಹಿಂದೆಯಷ್ಟೇ ಅರಮನೆಗೆ ಗಜಪ್ರವೇಶವಾಗಿತ್ತು. ನಿನ್ನೆ ಅವುಗಳ ತೂಕ ಪರೀಕ್ಷೆಯೂ ನಡೆದಿತ್ತು. ಈಗಾಗಲೇ ಗಜಪಡೆಗಳು ಆಗಮಿಸಿ ಇಷ್ಟರಲ್ಲಾಗಲೇ ತಾಲೀಮು ಆರಂಭವಾಗಬೇಕಿತ್ತು.  ಕಾರಣಾಂತರಗಳಿಂದ ಗಜಪಡೆಗಳ ಪಯಣ ತಡವಾಗಿತ್ತು. ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಇಂದಿನಿಂದಲೇ ತಾಲೀಮು ಆರಂಭವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: