ಪ್ರಮುಖ ಸುದ್ದಿ

ಅಪಘಾತದಿಂದ ನರಳುತ್ತಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಜಮೀರ್

ರಾಜ್ಯ(ಗದಗ)ಸೆ.7:- ಅಪಘಾತದಿಂದ ಗಾಯಗೊಂಡು ನರಳುತ್ತಿದ್ದ ಮೂವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಮಾನವೀಯತೆ ಮೆರೆದಿದ್ದಾರೆ.

ಪರಿಚಿತರ ಮದುವೆಗಾಗಿ ಗದಗ ಮಾರ್ಗವಾಗಿ ಕುಷ್ಟಗಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತೆರಳುತ್ತಿದ್ದರು. ಈ ವೇಳೆ ಗದಗ್ ರಸ್ತೆಯಲ್ಲಿ ಅಪಘಾತವಾಗಿ  ಮೂವರು ನರಳುತ್ತಿದ್ದರು. ಈ ಸಮಯದಲ್ಲಿ ತಕ್ಷಣ ತಮ್ಮ ಗಾಡಿ ನಿಲ್ಲಿಸಿದ ಸಚಿವ ಜಮೀರ್ ಅಪಘಾತಕ್ಕೀಡಾತವರ ನೆರವಿಗೆ ಧಾವಿಸಿ ಆ್ಯಂಬುಲೆನ್ಸ್ ಕರೆಸಿದ್ದಾರೆ.

ಮೂವರು ಗಾಯಾಳುಗಳನ್ನು ಹತ್ತಿರದ ಗದಗ್ ಆಸ್ಪತ್ರೆಗೆ ಕರೆದೊಯ್ದು  ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವ ಮೂಲಕ ಜಮೀರ್ ಮಾನವೀಯತೆ ಮೆರೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: