ಮೈಸೂರು

ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಬೈಕ್ ಕಳ್ಳ

ಮೈಸೂರು,ಸೆ.7:-ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಕೈಗೆ ಬೈಕ್ ಕಳ್ಳನೋರ್ವ ಸಿಕ್ಕಿ ಬಿದ್ದ ಘಟನೆ ಗನ್ ಹೌಸ್ ಬಳಿ ನಡೆದಿದೆ.

ಬೈಕ್ ಕಳ್ಳನನ್ನು ಬನ್ನಿಮಂಟಪದ ಎರಡನೇ ಹಂತದ ನಿವಾಸಿ ಶಾಹೀದ್(19)ಎಂದು ಗುರುತಿಸಲಾಗಿದ್ದು, ಈತ ನಂಬರ್ ಪ್ಲೇಟ್ ಇಲ್ಲದ ಡ್ಯೂಕ್ ಬೈಕ್ ಓಡಿಸಿಕೊಂಡು ಬಂದಾಗ ತಪಾಸಣೆಗಾಗಿ ಕೆ.ಆರ್.ಠಾಣೆಯ ಪೊಲೀಸರು ತಡೆದಿದ್ದಾರೆ. ಈ ವೇಳೆ ಆತ ದಾಖಲಾತಿಗಳನ್ನು ತೋರಿಸದೇ ಇದ್ದರಿಂದ ಪೊಲೀಸರು ಅನುಮಾನಗೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಡ್ಯೂಕ್ ಮತ್ತು ಆರ್ ಎಕ್ಸ್ 135 ಎಂಬ ಎರಡು ಐಷಾರಾಮಿ ಬೈಕ್ ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದು, ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: