ಮೈಸೂರು

ಸೆ.10ರಂದು ಮೊಹಮ್ಮದ್ ರಫಿ ಗೀತಗಾಯನ ಕಾರ್ಯಕ್ರಮ

ಶ್ರೇಷ್ಠ ಕೆ.ರಾವ್ ಹುಟ್ಟು ಹಬ್ಬದ ಅಂಗವಾಗಿ

ಮೈಸೂರು,ಸೆ.7 : ಗಾಯಕ ರಾಘವೇಂದ್ರ ರತ್ನಾಕರ್ ದಂಪತಿ ಪುತ್ರಿ ಶ್ರೇಷ್ಠ ಕೆ.ರಾವ್ ಅವರ ಹುಟ್ಟು ಹಬ್ಬದ ಅಂಗವಾಗಿ ಸೆ.10ರಂದು ಲಕ್ಷ್ಮೀಪುರಂನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದ್ ರಫಿ ಹಾಡಿರುವ ಹಾಡುಗಳ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಮೈಕ್ ಚಂದ್ರು ತಿಳಿಸಿದರು.

ಸಂಜೆ 6ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕೆ.ರಘುರಾಂ, ಎಸಿಪಿ ಧರ್ಮಪ್ಪ, ಕಲಾಪೋಷಕ ಕೆ.ವಿ.ಮೂರ್ತಿ, ಭಾಷ್ಯಂ ಸ್ವಾಮೀಜಿ ಹಾಗೂ ಇತರರು ಭಾಗವಹಿಸಲಿದ್ದಾರೆ, ಹುಟ್ಟು ಹಬ್ಬದಲ್ಲಿ ಶೇಖರಣೆಯಾಗುತ್ತಿದ್ದ ದೇಣಿಗೆಯನ್ನು ವಿವಿಧ ಸಂಘ ಸಂಸ್ಥೆಗಳು, ಅಸಹಾಯಕರಿಗೆ ನೀಡುತ್ತಾ ಬಂದಿದ್ದು ಈ ಬಾರಿಯ ದೇಣಿಗೆಯನ್ನು ಕೊಡಗಿನ ನೆರೆ ನಿರಾಶ್ರಿತರಿಗೆ ನೀಡಲಾಗುವುದು ಎಂದು ತಿಳಿಸಿದರು.

ಗಾಯಕ ರಾಘವೇಂದ್ರ ರತ್ನಾಕರ್, ಡಾ.ಪ್ರೀತಮ್ ರಾಘವೇಂದ್ರ, ಶ್ರೇಷ್ಠ ಕೆ. ರಾವ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: